ಕರ್ನಾಟಕ

karnataka

ETV Bharat / sitara

'ಬೆಲ್ ಬಾಟಂ' ತೊಟ್ಟು ಹಾಫ್ ಸೆಂಚೂರಿ ಬಾರಿಸಿದ ಡಿಟೆಕ್ಟಿವ್​ ದಿವಾಕರ್​ - ಡಿಟೆಕ್ಟಿವ್​ ದಿವಾಕರ್​

ಈ ವರ್ಷದ ಹಿಟ್ ಚಿತ್ರಗಳ ಸಾಲಿಗೆ ಬೆಲ್​ಬಾಟಂ ಸಿನಿಮಾ ಸೇರಿದೆ. ಜಯತೀರ್ಥ ನಿರ್ದೇಶನ, ರಿಷಭ್ ಶೆಟ್ಟಿ, ಹರಿಪ್ರಿಯಾ ಅದ್ಭುತ ಅಭಿನಯ, ಅಜನೀಶ್ ಲೋಕನಾಥ್ ಸುಮಧುರ ಸಂಗೀತ ಸಿನಿಮಾ ಗೆಲುವಿಗೆ ಕಾರಣವಾಗಿದೆ.

ಬೆಲ್​ಬಾಟಂ

By

Published : Apr 5, 2019, 8:55 PM IST

ರಿಷಭ್ ಶೆಟ್ಟಿ ನಟನೆಯ 'ಬೆಲ್ ಬಾಟಂ' ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ. ಇದೇ ಫೆಬ್ರವರಿಯಲ್ಲಿ ತೆರೆಕಂಡಿದ್ದ ಈ ಸಿನಿಮಾ ಅಮೋಘವಾಗಿ ಪ್ರದರ್ಶನ ಕಂಡು ಹಾಫ್ ಸೆಂಚೂರಿ ಬಾರಿಸಿದೆ.

ಈ ಸಂತಸವನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. 80ರ ದಶಕದ ರೆಟ್ರೊ ಸ್ಟೈಲಲ್ಲಿ ಮೂಡಿ ಬಂದಿರುವ 'ಬೆಲ್ ಬಾಟಂ' ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಚಿತ್ರದಲ್ಲಿ ಡಿಟೆಕ್ಟಿವ್ ದಿವಾಕರನ ಪಾತ್ರ ಸಿನಿ ರಸಿಕರಿಗೆ ಇಷ್ಟವಾಗಿದೆ. ಈ ಚಿತ್ರದ ಮೂಲಕ ರಿಷಭ್ ಶೆಟ್ಟಿ ಫುಲ್ ಫ್ಲೆಡ್ಜ್​ ನಟನಾಗಿ, ಈಗ ಹಲವು ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕುಸುಮ ಪಾತ್ರದ ಮೂಲಕ ನಟಿ ಹರಿಪ್ರಿಯಾ ಕೂಡ ನೋಡುಗರ ಮನಗೆದ್ದಿದ್ದಾರೆ.

ಇನ್ನು 'ಬೆಲ್ ಬಾಟಂ' ಚಿತ್ರ ತಮಿಳು, ತೆಲುಗು, ಹಿಂದಿಯಲ್ಲಿ ರಿಮೇಕ್ ಆಗ್ತಿದ್ದು ನಿರ್ದೇಶಕ ಜಯತೀರ್ಥ ಅವರಿಗೆ ಒಳ್ಳೆ ಬ್ರೇಕ್ ಕೊಟ್ಟಿದೆ.

ABOUT THE AUTHOR

...view details