ಚಂದನವನದ ಸಿನಿಪ್ರೇಕ್ಷಕರಿಗೆ ಪರಿಪೂರ್ಣ ಥ್ರಿಲ್ಲರ್ ಸಿನಿಮಾ ಒಂದೊಳ್ಳೆ ಅನುಭವ ನೀಡಿದ ಬೆಲ್ ಬಾಟಂ ತಂಡ ಖುಷಿಯ ವಿಚಾರವೊಂದನ್ನು ಹಂಚಿಕೊಂಡಿದೆ.
ಭರ್ಜರಿ 50ನೇ ದಿನದತ್ತ ಮುನ್ನುಗ್ಗುತ್ತಿರುವ ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯಾ ಮುಖ್ಯ ನಟನೆಯ ಬೆಲ್ ಬಾಟಂ ಚಿತ್ರ ತೆಲುಗು ಹಾಗೂ ಹಿಂದಿಯಲ್ಲಿ ರಿಮೇಕ್ ಆಗಲು ಹೊರಟಿದೆ. ಇದನ್ನು ಸ್ವತಃ ಚಿತ್ರದ ಹೀರೋ ರಿಷಭ್ ಶೆಟ್ಟಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಬೆಲ್ ಬಾಟಂ ಸಿನಿಮಾ ಬಿಡುಗಡೆಯೂ ಮುನ್ನವೇ ತಮಿಳಿನ ರಿಮೇಕ್ ಹಕ್ಕುಗಳು ಮಾರಾಟವಾಗಿದ್ದವು. ಚಿತ್ರದ ಭರ್ಜರಿ ಸಕ್ಸಸ್ ಬಳಿಕ ದಕ್ಷಿಣದ ಮತ್ತೊಂದು ಭಾಷೆ ಹಾಗೂ ಬಾಲಿವುಡ್ಗೂ ಹೊರಡಲು ತಯಾರಾಗಿದೆ.
ದಯಾನಂದ್ ಟಿ.ಕೆ ಬರೆದ ಬೆಲ್ ಬಾಟಂ ಕಥೆಯನ್ನು ಸದಭಿರುಚಿ ಸಿನಿಮಾಗಳ ಸರದಾರ ಜಯತೀರ್ಥ ನಿರ್ದೇಶನ ಮಾಡಿದ್ದರು. ರಿಷಭ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.