100 ದಿವಸ ಪ್ರದರ್ಶನ ಕಂಡಿರುವ ಈ ವರ್ಷದ ಮೊದಲ ಸಿನಿಮಾ ‘ಬೆಲ್ ಬಾಟಂ’ಗೆ ಭಾರೀ ಪ್ರಶಂಸೆ ಸಿಗುತ್ತಿದೆ. ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಏರ್ಪಡಿಸುವ ‘ಬೆಳ್ಳಿ ಸಿನಿಮಾ, ಬೆಳ್ಳಿ ಮಾತು’ ಕಾರ್ಯಕ್ರಮಕ್ಕೆ ಈ ಚಿತ್ರ ಆಯ್ಕೆ ಆಗಿದೆ.
ನಾಳೆ (ಶನಿವಾರ) ಸಂಜೆ ನಗರದ ಚಾಮುಂಡೇಶ್ವರಿ ಸ್ಟುಡಿಯೋ ಪ್ರದರ್ಶನ ಮಂದಿರದಲ್ಲಿ ಚಿತ್ರದ ಪ್ರದರ್ಶನ ನಂತದ ‘ಬೆಳ್ಳಿ ಮಾತು’, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಉಪಸ್ಥಿತಿಯಲ್ಲಿ ನಡೆಯಲಿದೆ.
‘ಬೆಳ್ಳಿ ಸಿನಿಮಾ, ಬೆಳ್ಳಿ ಮಾತು’ ಆಹ್ವಾನ ಪತ್ರಿಕೆ ನಿರ್ದೇಶಕ ಜಯತೀರ್ಥ, ನಿರ್ಮಾಪಕ ಸಂತೋಷ್ ಕುಮಾರ್, ನಾಯಕ ರಿಷಬ್ ಶೆಟ್ಟಿ, ನಾಯಕಿ ಹರಿಪ್ರಿಯಾ, ಅಚ್ಯುತ್ ಕುಮಾರ್, ಸಂಗೀತ ನಿರ್ದೇಶಕ ಅಜನಿಶ್ ಲೋಕನಾಥ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಕಥೆಗಾರ ಟಿ ಕೆ ದಯಾನಂದ, ಸಂಭಾಷಣೆ ಬರೆದ ರಘು ನಿಡುವಲ್ಲಿ ಅಂದು ‘ಬೆಳ್ಳಿ ಸಿನಿಮಾ ಬೆಳ್ಳಿ ಮಾತು’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಿರ್ದೇಶಕ ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಬೆಲ್ ಬಾಟಂ’ 125 ದಿವಸಕ್ಕೆ ಮುನ್ನುಗುತ್ತಿದೆ. ಕನ್ನಡ ಚಿತ್ರ ರಂಗದ ವ್ಯಕ್ತಿಗಳು ಈ ‘ಬೆಳ್ಳಿ ಮಾತು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರದ ಯಶಸ್ಸಿಗೆ ಕಾರಣವಾದ ವಿಚಾರಗಳನ್ನು ಅರಿಯುವುದು ‘ಬೆಳ್ಳಿ ಮಾತು’ ಕಾರ್ಯಕ್ರಮದ ಉದ್ದೇಶಗಳಲ್ಲಿ ಒಂದು.