ಸುದೀಪ್ ಅಭಿನಯದ 'ವರದನಾಯಕ' ಸಿನಿಮಾ ನಾಯಕಿ ಸಮೀರಾ ರೆಡ್ಡಿ ನಿಮಗೆಲ್ಲಾ ಗೊತ್ತು. ಮೂಲತಃ ತೆಲುಗು ಕುಟುಂಬದಲ್ಲಿ ಹುಟ್ಟಿದ ಸಮೀರಾ, ಹಿಂದಿ, ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 2014ರಲ್ಲಿ ಅಕ್ಷಯ್ ವಾರ್ದೆ ಎಂಬ ಉದ್ಯಮಿ ಕೈ ಹಿಡಿದ ಸಮೀರ ನಂತರ ಸಿನಿಮಾಗಳಿಂದ ಹಿಂದೆ ಸರಿದರು. ಈಗ ಸಮೀರಾಗೆ ಒಬ್ಬ ಮಗನಿದ್ದಾನೆ. ಆದರೆ ಸಮೀರಾ ಮೊದಲ ಮಗುವಿಗೆ ಗರ್ಭಿಣಿಯಾದಾಗಿನಿಂದ ಮನೆಯಿಂದ ಹೊರ ಬರಲು ಎರಡು ವರ್ಷ ಬೇಕಾಯಿತಂತೆ. ಈಗ ಸಮೀರಾಗ 4 ವರ್ಷದ ಮಗನಿದ್ದು, ಮತ್ತೆ ಅವರು ಮತ್ತೆ ಎರಡನೇ ಮಗುವಿನ ತಾಯಿಯಾಗುತ್ತಿದ್ದಾರೆ.
ಸಮೀರಾ ರೆಡ್ಡಿ ಆ ಕಾರಣಕ್ಕೆ 2 ವರ್ಷ ಮನೆಯಿಂದ ಹೊರ ಬರಲಿಲ್ಲವಂತೆ! - undefined
ಸಿನಿಮಾ ನಟಿ ಎಂದರೆ ಅವರು ನೋಡಲು ಬ್ಯೂಟಿಯಾಗಿದ್ದಾರೆ ಎಂದೇ ಅರ್ಥ. ಅದರಲ್ಲೂ ತಾವು ತೆಗೆದುಕೊಳ್ಳುವ ಸಂಭಾವನೆಯ ಅರ್ಧ ಭಾಗ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಖರ್ಚು ಮಾಡುತ್ತಾರೆ.
ಸಮೀರಾಗೆ ಮಗು ಆದಾಗ ಅವರ ತೂಕ 102 ಕೆಜಿ ಇತ್ತಂತೆ. ಎಷ್ಟೇ ಪ್ರಯತ್ನಿಸಿದರೂ ಅವರ ದೇಹದ ತೂಕ ಕಡಿಮೆ ಆಗಲಿಲ್ಲವಂತೆ. ಮದುವೆಗಿಂತ ಮುಂಚೆ ನನ್ನನ್ನು ಎಲ್ಲರೂ ಸೆಕ್ಸಿ ಸಾಮ್ ಎಂದು ಕರೆಯುತ್ತಿದ್ದರು. ಆದರೆ ನನ್ನ ತೂಕ ನೋಡಿ ಜನರು ಏನತನ್ನುತ್ತಾರೋ ಎಂಬ ಭಯದಿಂದ ನಾನು ಮನೆಯಿಂದ ಹೆಚ್ಚು ಹೊರಬರುತ್ತಿರಲಿಲ್ಲ. ಗರ್ಭಿಣಿಯಾದಾಗ 'ಅಲೊಪೇಷಿಯಾ ಏರಿಯೆಟಾ' ಎಂಬ ವ್ಯಾಧಿ ನನ್ನನ್ನು ಬಾಧಿಸಿತ್ತು. ಇದರ ಜೊತೆಗೆ ನನ್ನ ತಲೆಗೂದಲು ಕೂಡಾ ಉದುರಲು ಆರಂಭಿಸಿತ್ತು. ಒಂದು ವೇಳೆ ಮೀಡಿಯಾ ಮುಂದೆ ಬಂದರೆ ಆಗಿರುವ ನನ್ನ ಸ್ಥಿತಿಯನ್ನು ಎಲ್ಲರೂ ನೋಡುತ್ತಿದ್ದರು.
ತಾಯಿ ಆಗಿದ್ದಕ್ಕೆ ಸಂತೋಷ ಪಡಬೇಕಾ ಅಥವಾ ಒಬ್ಬ ನಟಿಗಿದ್ದ ಲಕ್ಷಣವನ್ನು ಕಳೆದುಕೊಂಡನಲ್ಲಾ ಎಂದು ದುಃಖಿಸಲಾ ಎಂದು ನೆನಪಿಸಿಕೊಂಡೇ ನಾನು ಡಿಪ್ರೆಶನ್ಗೆ ಹೋದೆ. ಈ ಕಾರಣಕ್ಕೆ ಥೆರಪಿಸ್ಟ್ ಸಹಾಯದಿಂದ ಈ ಎಲ್ಲಾ ತೊಂದರೆಗಳಿಂದ ಹೊರಬಂದು ಮತ್ತೆ ನಾನು ಸಿನಿಮಾ ಮಾಡಬೇಕು ಎಂದು ಕಷ್ಟ ಪಟ್ಟು ವ್ಯಾಯಾಮ, ಯೋಗ ಮಾಡಿ ಮತ್ತೆ ತೂಕ ಇಳಿಸಿದ್ದೇನೆ. ಡಿಪ್ರೆಶನ್ನಿಂದ ಹೊರ ಬಂದಿದ್ದೇನೆ ಎಂದು ಸಮೀರಾ ತಾವು ಅನುಭವಿಸಿದ ಯಾತನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.