ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಬಳಿಕ ಚೆಲುವಿನ ಚಿತ್ತಾರ ಸಿನಿಮಾದಿಂದ ಹೀರೋಯಿನ್ ಆದ ನಟಿ ಅಮೂಲ್ಯ. 2017ರಲ್ಲಿ ಉದ್ಯಮಿ ಜಗದೀಶ್ ಜೊತೆ ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಈ ದಂಪತಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಇತ್ತೀಚೆಗಷ್ಟೇ ಅಮೂಲ್ಯ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ದರು. ನಿನ್ನೆ ರಾಜರಾಜೇಶ್ವರಿ ನಗರ ನಿವಾಸದಲ್ಲಿ ಅಮೂಲ್ಯ ಅವರ ಅದ್ಧೂರಿ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಸೀಮಂತ ಕಾರ್ಯಕ್ರಮವನ್ನು ಗ್ರೀನ್ ಥೀಮ್ನ ಸೆಟ್ ಹಾಕಿ ಮಾಡಲಾಯ್ತು.