ಕರ್ನಾಟಕ

karnataka

ETV Bharat / sitara

BBC News (World)ನಲ್ಲಿ ಕನ್ನಡದ 'ಯುವರತ್ನ'ನ ಅಗಲಿಕೆಯ ಸುದ್ದಿ ಪ್ರಸಾರ..

ಕನ್ನಡದ ಕುವರ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಿಧನದಿಂದ ಒಂದೆಡೆ ಕರುನಾಡೇ ಶೋಕಸಾಗರದಲ್ಲಿ ಮುಳುಗಿದೆ. ಇನ್ನೊಂದೆಡೆ ನಮ್ಮ ನೆಲದ, ಭಾಷೆಯ ನಟ ಅಂತಾರಾಷ್ಟ್ರೀಯ ಸುದ್ದಿ ವಾಹಿನಿಯವರ ಗಮನ ಸೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ..

BBC News (World)ನಲ್ಲಿ ಕನ್ನಡದ 'ಯುವರತ್ನ'ನ ಅಗಲಿಕೆಯ ಸುದ್ದಿ ಪ್ರಸಾರ
BBC News (World)ನಲ್ಲಿ ಕನ್ನಡದ 'ಯುವರತ್ನ'ನ ಅಗಲಿಕೆಯ ಸುದ್ದಿ ಪ್ರಸಾರ

By

Published : Oct 30, 2021, 8:38 PM IST

ನವದೆಹಲಿ :ದಕ್ಷಿಣ ಭಾರತದ ಸಿನಿರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ಕೇವಲ ದೇಶ ಮಾತ್ರವಲ್ಲ, ವಿದೇಶಗಳ ಸುದ್ದಿ ವಾಹಿನಿಗಳಲ್ಲೂ ಪ್ರಸಾರವಾಗಿದೆ. BBC News (World)ನಲ್ಲಿ ಪುನೀತ್ ಸಾವು ಮತ್ತು ಅಭಿಮಾನಿಗಳ ಆಕ್ರಂದನದ ಬಗ್ಗೆ ವರದಿ ಬಿತ್ತರವಾಗಿದೆ.

ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿಯನ್ನು BBC News (World) ತನ್ನ ವಾಹಿನಿಯಲ್ಲಿ ಪ್ರಸಾರ ಮಾಡಿದ್ದು ಮತ್ತು ವೆಬ್​ಸೈಟ್​ನಲ್ಲಿ Puneeth Rajkumar: Indian film star dies age 46 ಎಂಬ ಶೀರ್ಷಿಕೆ ಅಡಿ ಸುದ್ದಿಯನ್ನು ವರದಿ ಮಾಡಿದೆ.

ಅಪ್ಪು ನಿಧನದ ಸುದ್ದಿ ಓದಿದ ನಿರೂಪಕಿ, ಪುನೀತ್​ ಅವರ ಕುಟುಂಬ ಈ ದುಃಖವನ್ನು ಹೇಗೆ ಭರಿಸುತ್ತಿದೆ ಎಂದು ಲಂಡನ್​ನ ಸಿನಿಮಾ ವಿಮರ್ಶಕಿಗೆ ಪ್ರಶ್ನೆ ಕೇಳುತ್ತಾರೆ.

ಇದಕ್ಕೆ ಉತ್ತರಿಸಿದ ಅವರು, ನಾನು ಅವರ ಅಣ್ಣ ಖ್ಯಾತ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದೆ. ಅವರ ಕುಟುಂಬ, ನಾನು ಸೇರಿದಂತೆ ಎಲ್ಲರೂ ಆಘಾತಕ್ಕೊಳಗಾಗಿದ್ದೇವೆ. ನಿನ್ನೆಯಷ್ಟೇ ಶಿವರಾಜ್​ ಕುಮಾರ್​ ಮತ್ತು ಯಶ್ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. ಬೆಳಗ್ಗೆ(ಅ.29) ಪುನೀತ್ ಅವರ ನಿಧನದ ಸುದ್ದಿ ಎಲ್ಲರ ಆಘಾತಕ್ಕೆ ಕಾರಣವಾಗಿದೆ ಎಂದು ಹೇಳುತ್ತಾರೆ.

ಅವರಿಗೆ ಇನ್ನೂ 46 ವರ್ಷ ವಯಸ್ಸು. ಪ್ರತಿಭಾನ್ವಿತ ನಟ. 29 ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಸಾವಿರಾರು ಸಂಖ್ಯೆಯ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ ಎಂದು ಸಿನಿಮಾ ವಿಮರ್ಶಕಿ ವಿವರಿಸುತ್ತಾರೆ.

ಅಲ್ಲಿ ನೆರೆದಿರುವ ಜನಸಾಗರ ನೋಡಿದಾಗ ಅವರ ಬಗ್ಗೆ, ಅವರ ವರ್ಚಸ್ಸಿನ ಅರಿವಾಗುತ್ತದೆ ಎಂದು BBC News (World) ನಿರೂಪಿಕಿ ಹೇಳಿದಾಗ, ವಿಮರ್ಶಕರು ಡಾ.ರಾಜ್​ಕುಮಾರ್ ಹಾಗೂ ಅಪ್ಪು ಬಾಲ್ಯದ ಬಗ್ಗೆ ಮಾತನಾಡುತ್ತಾರೆ.

ಕನ್ನಡದ ಕುವರ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಿಧನದಿಂದ ಒಂದೆಡೆ ಕರುನಾಡೇ ಶೋಕಸಾಗರದಲ್ಲಿ ಮುಳುಗಿದೆ. ಇನ್ನೊಂದೆಡೆ ನಮ್ಮ ನೆಲದ, ಭಾಷೆಯ ನಟ ಅಂತಾರಾಷ್ಟ್ರೀಯ ಸುದ್ದಿ ವಾಹಿನಿಯವರ ಗಮನ ಸೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಓದಿ:ಅಪ್ಪ ಪುನೀತ್ ತಲೆ ಸವರಿ ಮುತ್ತು ಕೊಟ್ಟ ಪುತ್ರಿ ಧೃತಿ.. ಪಾರ್ಥಿವ ಶರೀರ ಕಂಡು ಉಮ್ಮಳಿಸಿದ ದುಃಖ..

ABOUT THE AUTHOR

...view details