ಕರ್ನಾಟಕ

karnataka

ETV Bharat / sitara

ಬಜಾರ್​​ಗೆ ಬಂತು ಪೈರಸಿ ಕಾಟ: ಸೈಬರ್ ಕ್ರೈಂ ವಿಭಾಗಕ್ಕೆ ದೂರು - undefined

ಸಕ್ಸಸ್​​ಫುಲ್ ಸಿನಿಮಾಗಳಿಗೆ ಪೈರಸಿ ಕಾಟ ಸಾಮಾನ್ಯ. ಇದೀಗ ಕಳೆದ ವಾರ ಬಿಡುಗಡೆಯಾದ ಸಿಂಪಲ್​​ಸುನಿ ನಿರ್ದೇಶನದ ಬಜಾರ್ ಸಿನಿಮಾಗೂ ಪೈರಸಿ ಕಾಟ ಶುರುವಾಗಿದ್ದು ಈ ಸಂಬಂಧ ಚಿತ್ರತಂಡ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ.

ಬಜಾರ್

By

Published : Feb 6, 2019, 1:48 PM IST

ಫೆಬ್ರವರಿ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿಂಪಲ್‌ ಸುನಿ ನಿರ್ದೇಶನದ ‘ಬಜಾರ್’ ಸಿನಿಮಾಗೆ ಪೈರಸಿ ಕಾಟ ಎದುರಾಗಿದ್ದು ಚಿತ್ರತಂಡ ಶಾಕ್​​ನಲ್ಲಿದೆ.

ರಷ್ಯಾ ಮೂಲದ ‘ಟೆಲಿಗ್ರಾಂ’ ಆ್ಯಪ್‌ನಲ್ಲಿ ಸಿನಿಮಾದ ಥಿಯೇಟರ್ ಪ್ರಿಂಟ್ ಲೀಕ್ ಆಗಿದ್ದು, ಇಲ್ಲಿಯವರೆಗೆ 1.80 ಲಕ್ಷ ಜನರು ಈ ಆ್ಯಪ್​​​ನಲ್ಲಿ ಸಿನಿಮಾ ನೋಡಿದ್ದಾರೆ. ಹೊಸ ಸಿನಿಮಾಗಳು ಯೂಟ್ಯೂಬ್ ಮತ್ತು ಫೇಸ್‌ಬುಕ್‌ ಪೈರಸಿ ಕಾಟ ಎದುರಿಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಸಿನಿಮಾ ಪೈರಸಿ ಮಾಡುವವರ ವಿರುದ್ಧ ಯಾವುದೇ ಕಠಿಣ ಕ್ರಮ‌ ಕೈಗೊಳ್ಳದಿರುವುದು ಪೈರಸಿ ಕೊನೆಯಾಗದಿರಲು ಕಾರಣ ಎನ್ನಬಹುದು. ’ಬಜಾರ್’ ಚಿತ್ರವನ್ನು ಪೈರಸಿ ಮಾಡಿದವರ ವಿರುದ್ಧ ಚಿತ್ರತಂಡ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದೆ.

ಧನ್​ವೀರ್, ಅದಿತಿ

ಟೆಲಿಗ್ರಾಂ ಆ್ಯಪ್‌ ಮೂಲಕ ಪೈರಸಿ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯೂಟ್ಯೂಬ್, ಫೇಸ್​​​ಬುಕ್​​​ನಲ್ಲಿ ವಿಡಿಯೋವನ್ನು ಅಪ್​​ಲೋಡ್​​​ ಮಾಡಿದ್ರೆ ಡಿಲೀಟ್ ಮಾಡಬಹುದು. ಆದರೆ ಈ ಟೆಲಿಗ್ರಾಂ ಆ್ಯಪ್​​​ನಲ್ಲಿ ವಿಡಿಯೋವನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಆ್ಯಪ್‌ನಲ್ಲಿರುವ ವಿಡಿಯೊವನ್ನು ನಾಶಗೊಳಿಸಲು ಹೈದರಾಬಾದ್‌ನ ಖಾಸಗಿ ಸಂಸ್ಥೆಯೊಂದಕ್ಕೆ ಕೋರಿದ್ದೇವೆ. ಅವರು ವಿಡಿಯೋ ಡೌನ್‌ಲೋಡ್‌ ಲಿಂಕ್‌ಗೆ ವೈರಸ್‌ ಇಂಜೆಕ್ಟ್ ಮಾಡಿದ್ದು, ಈ ಆ್ಯಪ್​ನಿಂದ ವಿಡಿಯೊವನ್ನು ಡೌನ್‌ಲೋಡ್‌ ಮಾಡಿದರೆ ಮೊಬೈಲ್‌ ಹ್ಯಾಂಗ್ ಆಗಲಿದೆ’ ಎಂದು ಚಿತ್ರತಂಡ ನಿರಾಸೆಯಿಂದಲೇ ಅಸಹಾಯಕತೆಯನ್ನು ವ್ಯಕ್ತಪಡಿಸಿತು.

For All Latest Updates

TAGGED:

ABOUT THE AUTHOR

...view details