ಕರ್ನಾಟಕ

karnataka

ETV Bharat / sitara

ಖ್ಯಾತ ಸಾಹಿತಿ ಜೊತೆ ಸೇರಿ ಮತ್ತೊಂದು ಕೊರೊನಾ ವಿಡಿಯೋ ಮಾಡಿದ ನಾದಬ್ರಹ್ಮ - Baraguru Ramachandrappa wrote corona song

ಕೊರೊನಾ ಬಗ್ಗೆ ಈಗಾಗಲೇ ಒಂದು ಹಾಡನ್ನು ಮಾಡಿದ್ದ ನಾದಬ್ರಹ್ಮ ಹಂಸಲೇಖ ಈಗ 'ಹೊಸ ಅಧ್ಯಾಯ' ಎಂಬ ಮತ್ತೊಂದು ಹಾಡಿಗೆ ಸಂಗೀತ ನೀಡಿ ಹಾಡಿದ್ದಾರೆ. ಈ ಹಾಡಿಗೆ ನಾಡೋಜ ಪ್ರಶಸ್ತಿ ವಿಜೇತ ಬರಗೂರು ರಾಮಚಂದ್ರಪ್ಪ ಸಾಹಿತ್ಯ ಬರೆದಿದ್ದಾರೆ.

corona song
'ಹೊಸ ಅಧ್ಯಾಯ'

By

Published : Jun 2, 2020, 5:38 PM IST

Updated : Jun 2, 2020, 5:44 PM IST

ಒಬ್ಬರು ನಾದಬ್ರಹ್ಮ, ಇನ್ನೊಬ್ಬರು ನಾಡೋಜ ಪ್ರಶಸ್ತಿ ವಿಜೇತ. ನಾದಬ್ರಹ್ಮ ಹಂಸಲೇಖ ಅವರದ್ದು ಕಳೆದ 40 ವರ್ಷಗಳಿಂದ ಸಂಗೀತ ಪಯಣವಾದರೆ, ನಾಡೋಜ ಪ್ರಶಸ್ತಿ ವಿಜೇತ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಕನ್ನಡ ಸಿನಿಮಾ ನಿರ್ದೇಶಕ ಕೂಡಾ. ಇವರಿಬ್ಬರೂ ಜೊತೆ ಸೇರಿ ಕೊರೊನಾ ವೈರಸ್​​ ಬಗ್ಗೆ ವಿಡಿಯೋ ಆಲ್ಬಮ್ ಒಂದನ್ನು ಸಿದ್ಧ ಮಾಡಿದ್ದಾರೆ. ಈ ವಿಡಿಯೋ ಈಗ ಯೂಟ್ಯೂಬ್​​​ನಲ್ಲಿ ಅಪ್​​​ಲೋಡ್ ಲಭ್ಯವಿದೆ.

ಹಂಸ-ಬರಗೂರು ಜೋಡಿಯ ಈ ಹಾಡಿಗೆ 'ಹೊಸ ಅಧ್ಯಾಯ' ಎಂದು ನಾಮಕರಣ ಮಾಡಲಾಗಿದೆ. 'ದೇಶ ವಿದೇಶದ ಸಂಚಾರಿ...ಕಣ್ಣಿಗೆ ಕಾಣದ ಸಂಹಾರಿ' ಎಂಬ ಸಾಲುಗಳಿಂದ ಆರಂಭವಾಗುವ ಈ ಗೀತೆಯ ಸಾಹಿತ್ಯವನ್ನು ಪ್ರೊ. ಬರಗೂರು ರಾಮಚಂದ್ರಪ್ಪ ಬರೆದಿದ್ದಾರೆ. ಇದಕ್ಕೆ ರಾಗ ಸಂಯೋಜನೆ ಮಾಡಿ ಹಾಡಿರುವವರು ಹಂಸಲೇಖ. ಈ 'ಹೊಸ ಅಧ್ಯಾಯ' ಹಾಡಿಗೆ ಬೇಕಾದ ವಿಡಿಯೋ ತುಣುಕುಗಳನ್ನು ವಿಶ್ವಾಸ್ ಮಾದಿಶೆಟ್ಟಿ ಹೊಂದಿಸಿ ಅವರೇ ಸಂಕಲನ ಕೂಡಾ ಮಾಡಿದ್ದಾರೆ. ಸತೀಶ್ ರಾಜೇಂದ್ರನ್ ಛಾಯಾಗ್ರಹಣ ಒದಗಿಸಿದ್ದಾರೆ.

ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ

ಇದಕ್ಕೂ ಮುನ್ನವೇ ನಾದಬ್ರಹ್ಮ ಹಂಸಲೇಖ ಅವರು ತಮ್ಮ ಮಡದಿ ಲತಾ ಹಂಸಲೇಖ ಹಾಗೂ ಪುತ್ರಿ ನಂದಿನಿ ಜೊತೆ ಸೇರಿ, ಕೊರೊನಾ ಬಗ್ಗೆ ಒಂದು ಹಾಡು ಹಾಡಿದ್ದರು. ಈ ಹಾಡಿಗೂ ಕೂಡಾ ಸಂಗೀತಪ್ರಿಯರಿಂದ ಒಳ್ಳೆ ಪ್ರತಿಕ್ರಿಯೆ ದೊರೆತಿತ್ತು.

ನಾದಬ್ರಹ್ಮ ಹಂಸಲೇಖ
Last Updated : Jun 2, 2020, 5:44 PM IST

ABOUT THE AUTHOR

...view details