ಸಿಲಿಗುರಿ/ಜಲ್ಪೈಗುರಿ (ಪಶ್ಚಿಮ ಬಂಗಾಳ): ಸಂಗೀತ ಪ್ರಪಂಚದೊಂದಿಗಿನ ಅವರ ಬಿಡುವಿಲ್ಲದ ವೇಳಾಪಟ್ಟಿಯ ಜೊತೆಗೆ, ಸಂಗೀತ ಸಂಯೋಜಕ ಬಪ್ಪಿ ಲಹಿರಿ ಉತ್ತರ ಬಂಗಾಳದ ಬೆಟ್ಟಗಳು ಮತ್ತು ಕಾಡುಗಳ ಕಡೆಗೆ ವಿಶೇಷ ಆಕರ್ಷಣೆ ಹೊಂದಿದ್ದರು.
ಉತ್ತರ ಬಂಗಾಳದ ಪ್ರಮುಖ ಪಟ್ಟಣ ಮತ್ತು ಈಶಾನ್ಯ ಭಾರತದ ಹೆಬ್ಬಾಗಿಲು ಸಿಲಿಗುರಿಯೊಂದಿಗಿನ ಅವರ ಒಡನಾಟವು ಅಲ್ಲಿನ ಚೌಧರಿ ಕುಟುಂಬದ ನೆನಪುಗಳಿಂದ ಎಂದಿಗೂ ಮರೆಯಾಗುವುದಿಲ್ಲ. ಉತ್ತರ ಬಂಗಾಳಕ್ಕೆ ಭೇಟಿ ನೀಡಿದ ಸಾಕಷ್ಟು ಸಮಯ ಅಲ್ಲೇ ಕಳೆಯುತ್ತಿದ್ದರು.
ಲಹಿರಿ ಚೌಧರಿ ಕುಟುಂಬದೊಂದಿಗೆ ಬಪ್ಪಿ ಅವರು ತಾಯಿಯ ಕಡೆಯಿಂದ ರಕ್ತ ಸಂಬಂಧವನ್ನು ಹೊಂದಿದ್ದರು. ದಿವಂಗತ ಸಂಗೀತ ಸಂಯೋಜಕರನ್ನು ನೆನಪಿಸಿಕೊಳ್ಳುವಾಗ ಅವರ ಸೋದರ ಸಂಬಂಧಿ ಭೋಬೋತೋಷ್ ಚೌಧರಿ ವಾಸ್ತವಿಕವಾಗಿ ಕಣ್ಣೀರಿಟ್ಟರು.
ಬಪ್ಪಿ ಲಹರಿಯ ಸುದ್ದಿ ಸಂಬಂಧಿಕರೊಬ್ಬರಿಂದ ದೂರವಾಣಿ ಮೂಲಕ ತಿಳಿಸಿದರು, ಈ ಸುದ್ದಿಯಿಂದ ಇಡೀ ಚೌಧರಿ ಕುಟುಂಬ ಆಘಾತಕ್ಕೊಳಗಾಯಿತು ಎಂದು ಭೋಬೋತೋಷ್ ಚೌಧರಿ ಹೇಳಿದರು.
"ಅವರು ಕೇವಲ ಎರಡು ವರ್ಷದವರಾಗಿದ್ದಾಗಿನಿಂದ ಸಿಲಿಗುರಿಗೆ ಬರುತ್ತಿದ್ದರು. ನನ್ನ ತಾಯಿ ಶಂಕರಿ ಚೌಧರಿ ಅವರ ತಾಯಿಯ ಚಿಕ್ಕಮ್ಮ. ನಾವು ಹುಟ್ಟಿ ಒಟ್ಟಿಗೆ ಬೆಳೆದಿದ್ದೇವೆ. ನಂತರ ಬಪ್ಪಿ ಮೊದಲು ಕೋಲ್ಕತ್ತಾಗೆ ಮತ್ತು ನಂತರ ಮುಂಬೈಗೆ ಸ್ಥಳಾಂತರಗೊಂಡರು.
ಮುಂಬೈನಲ್ಲಿ ಬ್ಯುಸಿ ಶೆಡ್ಯೂಲ್ ಇದ್ದರೂ ಬಪ್ಪಿ ನಿತ್ಯ ಸಿಲಿಗುರಿಗೆ ಬಂದು ಚೌಧುರಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದರು. ಅವರು ವರ್ಷಕ್ಕೆ ಕನಿಷ್ಠ ನಾಲ್ಕು ಬಾರಿ ನಮ್ಮ ಬಳಿಗೆ ಬರುತ್ತಿದ್ದರು" ಎಂದು ಭೋಬೋತೋಷ್ ಚೌಧರಿ ನೆನಪುಗಳನ್ನು ಈಟಿವಿ ಭಾರತ್ನೊಂದಿಗೆ ಹಂಚಿಕೊಂಡರು.
ಸಿಲಿಗುರಿಯಲ್ಲಿ 2016ರಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು. ಮುಂಬೈಗೆ ಹೋಗಿ ಅವರನ್ನು ಕಳೆದ ವರ್ಷ ಭೇಟಿ ಮಾಡಬೇಕು ಎಂದಿದ್ದೆವು. ಆದರೆ, ಆಗಿರಲಿಲ್ಲ. ಈಗ ಬೇಸರವಾಗುತ್ತಿದೆ. ಅವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ ಎಂದು ಭೋಬೋತೋಷ್ ಚೌಧರಿ ಹೇಳಿದರು.
ಬಪ್ಪಿಅವರಿಗೆ ಮೀನಿನಿಂದ ಮಾಡುತ್ತಿದ್ದ ಬಂಗಾಲಿ ಊಟ ತುಂಬಾ ಇಷ್ಟವಾಗುತ್ತಿತ್ತು. ಹೀಗಾಗಿ, ಅವರು ಸಿಲಿಗುರಿಗೆ ಬಂದಾಗಲೆಲ್ಲ ಮೀನಿನ ಖಾದ್ಯಗಳನ್ನು ಮಾಡುತ್ತಿದ್ದೆವು ಎಂದು ಸ್ಮರಿಸಿಕೊಂಡರು.
ಅಪ್ರತಿಮ ಬಾಲಿವುಡ್ ಗಾಯಕ-ಸಂಯೋಜಕ ಬಪ್ಪಿ ಲಹಿರಿ ಅವರು ಮಂಗಳವಾರ ರಾತ್ರಿ ಓಎಸ್ಎ (OSA- Obstructive Sleep Apnea) ದಿಂದ ನಿಧನರಾಗಿದ್ದಾರೆ. ಡಿಸ್ಕೋ ಸಂಗೀತವನ್ನು ಭಾರತೀಯ ಮುಖ್ಯವಾಹಿನಿಗೆ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮುಂಬೈನಲ್ಲಿ ಕೊನೆಯುಸಿರೆಳೆದಾಗ ಬಪ್ಪಿ ಅವರಿಗೆ 69 ವರ್ಷ. ಬಪ್ಪಿ ಅವರ ಮಗ ಬಪ್ಪಾ ಲಹಿರಿ ಲಾಸ್ ಏಂಜಲೀಸ್‌ನಿಂದ ಹಿಂತಿರುಗಲು ಕುಟುಂಬವು ಕಾಯುತ್ತಿರುವ ಕಾರಣ ಅವರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ನಡೆಯಲಿದೆ.
ಇದನ್ನೂ ಓದಿ:ಖ್ಯಾತ ಗಾಯಕ, ಸಂಗೀತ ಸಂಯೋಜಕ ಬಪ್ಪಿ ಲಹಿರಿ ಇನ್ನಿಲ್ಲ