ಕರ್ನಾಟಕ

karnataka

ETV Bharat / sitara

ಬಂದ ನೋಡು 'ಪೈಲ್ವಾನ್': ಟೈಟಲ್​​​​ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ - undefined

ಕೃಷ್ಣ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟಿಸಿರುವ 'ಪೈಲ್ವಾನ್'​​ ಚಿತ್ರದ ಟೈಟಲ್ ಹಾಡಿನ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಡಾ.ವಿ. ನಾಗೇಂದ್ರ ಪ್ರಸಾದ್ ಬರೆದಿರುವ 'ಬಂದ ನೋಡು ಪೈಲ್ವಾನ್ ' ಹಾಡನ್ನು ವ್ಯಾಸರಾಜ್​ ಹಾಡಿದ್ದಾರೆ.

ಪೈಲ್ವಾನ್​

By

Published : Jul 11, 2019, 11:21 PM IST

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಪೈಲ್ವಾನ್'​​ ಚಿತ್ರತಂಡ ಕೆಲವು ದಿನಗಳ ಹಿಂದೆ ಹೊಸ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಕಿಚ್ಚನ ಅಭಿಮಾನಿಗಳಿಗೆ ಥ್ರಿಲ್ ನೀಡಿತ್ತು. ಇದೀಗ ಚಿತ್ರದ ಟೈಟಲ್ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.

ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಪದಗಳಿಗೆ ಗಾಯಕ ವ್ಯಾಸರಾಜ್ ಸಖತ್ ಜೋಶ್​​ನಿಂದ ಹಾಡಿ ಜೀವ ತುಂಬಿದ್ದಾರೆ. ಗೀತೆಗೆ ಅರ್ಜುನ್ ಜನ್ಯ ಕ್ಯಾಚಿ ಟ್ಯೂನ್ ಹಾಕಿದ್ದಾರೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ 'ಪೈಲ್ವಾನ್ ' ಚಿತ್ರದ ಟೈಟಲ್​ ಟ್ಯ್ರಾಕ್​ ಬಿಡುಗಡೆ ಮಾಡಲಾಗಿದೆ. 'ಹೆಬ್ಬುಲಿ' ಚಿತ್ರವನ್ನು ನಿರ್ದೇಶಿಸಿದ್ದ ಕೃಷ್ಣ, ಪೈಲ್ವಾನ್​​​ಗೆ ಆ್ಯಕ್ಷನ್​​ ಕಟ್ ಹೇಳುವುದರ ಜೊತೆಗೆ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸೆಪ್ಟೆಂಬರ್​​​ನಲ್ಲಿ ಬಿಡುಗಡೆಯಾಗಲಿದೆ. ಈ ಮುನ್ನ ಆಗಸ್ಟ್​​​​ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿತ್ತಾದರೂ ಕಾರಣಾಂತರಗಳಿಂದ ಮುಂದೂಡಲಾಗಿದೆ. ಸದ್ಯಕ್ಕೆ 'ಬಂದ ನೋಡು ಪೈಲ್ವಾನ್ ' ಹಾಡಿನ ದರ್ಬಾರ್ ಜೋರಿದೆ.

For All Latest Updates

TAGGED:

ABOUT THE AUTHOR

...view details