ನಟ ಶಿವರಾಜ್ಕುಮಾರ್ ಅಭಿನಯದ 'ಭಜರಂಗಿ 2' ಚಿತ್ರವು ಈ ತಿಂಗಳ ಕೊನೆಗೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಭಜರಂಗಿ 2 ಚಿತ್ರದ ತೆಲುಗು ಡಬ್ಬಿಂಗ್ ಹಕ್ಕುಗಳನ್ನು ನಿರಂಜನ್ ಎನ್ನುವವರು ಪಡೆದಿದ್ದು, ಅವರು ಜೈ ಭಜರಂಗಿ ಹೆಸರಿನಲ್ಲಿ ತೆಲುಗಿಗೆ ಡಬ್ ಮಾಡಿ, ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ. ಆಂಧ್ರ ಮತ್ತು ತೆಲಂಗಾಣ ಎರಡು ರಾಜ್ಯಗಳಿಂದ ಸೇರಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ ಎಂಬ ಸುದ್ದಿ ಇದೆ.
ಶಿವರಾಜ್ಕುಮಾರ್ ಚಿತ್ರಗಳು ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವುದು ಹೊಸ ವಿಷಯವೇನಲ್ಲ. ಕೆಲವು ಚಿತ್ರಗಳು ಇಲ್ಲಿ ಬಿಡುಗಡೆಯಾಗಿ ಕೆಲವು ದಿನಗಳ ನಂತರ ತೆಲುಗಿಗೆ ಡಬ್ ಆಗಿ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿವೆ. ಇನ್ನೂ ಕೆಲವು ಚಿತ್ರಗಳು ನೇರವಾಗಿ ಟಿವಿಯಲ್ಲಿ ಪ್ರಸಾರವಾಗಿವೆ. ಆದರೆ, ಭಜರಂಗಿ 2 ಚಿತ್ರ ಏಕಕಾಲದಲ್ಲಿ ಮೂರು ರಾಜ್ಯಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.