ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆ ಹಾಗೂ ನಿರ್ದೇಶಕ ಎ. ಹರ್ಷ ನಿರ್ದೇಶನದ ಚಿತ್ರ 'ಭಜರಂಗಿ 2' ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಈ ಚಿತ್ರದಲ್ಲಿ ಮೂರು ಜನ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸಾಲಿನಲ್ಲಿ ಜಾಗ್ರವ ಪಾತ್ರ ಮಾಡಿರೋ ಪ್ರಸನ್ನ ಅವರನ್ನು ಸಂದರ್ಶನ ಮಾಡಲಾಗಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಒಂಬತ್ತು ವರ್ಷಗಳಿಂದ ಹಲವು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ಪ್ರಸನ್ನ ನಟಿಸಿದ್ದಾರೆ. ಇದೀಗ ಭಜರಂಗಿ 2 ಸಿನಿಮಾದಲ್ಲಿ ಭಯ ಹುಟ್ಟಿಸುವ ಜಾಗ್ರವ ಎಂಬ ರಾಕ್ಷಸನ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಪ್ರಸನ್ನ ಈಟಿವಿ ಭಾರತ್ ಜೊತೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಭಜರಂಗಿ 2 ಸಿನಿಮಾದಲ್ಲಿ ನಾನು ಜಾಗ್ರವ ಪಾತ್ರ ಮಾಡಿದ್ದೇನಿ. ಇದರಲ್ಲಿ ನಾನು 85 ವರ್ಷದ ವಿಲನ್ ಪಾತ್ರ ಮಾಡಿದ್ದೇನಿ. ನಟಿಸುವಾಗ ನನ್ನ ಮೇಲೆ 8 ಕೆಜಿಯ ಕಾಸ್ಟ್ಯೂಮ್ ಇತ್ತು. ಜತೆಗೆ ಹೀಲ್ಡ್ ಚಪ್ಪಲಿ ಎಲ್ಲವೂ ಸೇರಿ 6 ಅಡಿ ಇರುವ ನಾನು 8 ಅಡಿ ಎತ್ತರ ಕಾಣುತ್ತಿದ್ದೆ ಎಂದಿದ್ದಾರೆ.
ಶೂಟಿಂಗ್ ಟೈಮಲ್ಲಿ ದೊಡ್ಡದಾದ ಕಿರೀಟ, ಉದ್ದವಾದ ಬಿಳಿ ಗಡ್ಡ, ಭಯ ಹುಟ್ಟಿಸುವ ಆ ಕಣ್ಣುಗಳನ್ನ ನೋಡಿ ಸೆಟ್ಟು ಹುಡುಗರು ಕೂಡ ಹೆದರಿ ಓಡಿ ಹೋಗಿದ್ದಾರೆ. ನನ್ನ ಪಾತ್ರ ಭಜರಂಗಿ 2 ಸಿನಿಮಾದಲ್ಲಿ ಸೆಕೆಂಡ್ ಆಫ್ನಲ್ಲಿ ಬರಲಿದೆ ಎಂದು ತಿಳಿಸಿದ್ದಾರೆ.