'ಬಾಹುಬಲಿ', ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಸಿನಿಮಾ. ಎಸ್.ಎಸ್. ರಾಜಮೌಳಿ ನಿರ್ದೇಶನದ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರಾಯ್ತು. ಸುಮಾರು 200 ಕೋಟಿ ರೂಪಾಯಿ ಬಜೆಟ್ನ ಈ ಸಿನಿಮಾ 600 ಕೋಟಿ ರೂಪಾಯಿಗೂ ಹೆಚ್ಚು ಲಾಭ ಮಾಡಿತ್ತು.
ಎರಡು ಭಾಗಗಳ ಈ ಸಿನಿಮಾ ತೆಲುಗು, ತಮಿಳು ಭಾಷೆಯಲ್ಲಿ ತಯಾರಾಗಿ ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿತ್ತು. ಇದೀಗ ಈ ಸಿನಿಮಾ ಗುಜರಾತಿ ಭಾಷೆಯಲ್ಲಿ ತಯಾರಾಗುತ್ತಿದೆಯಂತೆ. ಆಶ್ಚರ್ಯ ಎನಿಸಿದರೂ ನಿಜ. ಅಂದಹಾಗೆ ಈ ಸಾಹಸ ಮಾಡಲು ಹೊರಟಿರುವುದು ಜಾನಿ ಬ್ರದರ್ಸ್. ನಿತಿನ್ ಜಾನಿ ಹಾಗೂ ತರುಣ್ ಜಾನಿ ಗುಜರಾತಿ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಗುಜರಾತ್ ಭಾಷೆಯಲ್ಲಿ ಕೆಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ಈ ಸಹೋದರರು ಈಗಾಗಲೇ ರೀಮೇಕ್ಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ.
ಎಸ್.ಎಸ್. ರಾಜಮೌಳಿ ಜೊತೆ ಅನುಷ್ಕಾ, ಪ್ರಭಾಸ್ ಈ ಬಗ್ಗೆ ಮಾತನಾಡಿರುವ ಜಾನಿ ಬ್ರದರ್ಸ್ 'ಲೈಫ್ನಲ್ಲಿ ರಿಸ್ಕ್ ಇರಲೇಬೇಕು. ನಮ್ಮ ಕೈಲಾದ ಮಟ್ಟಿಗೆ ಸಿನಿಮಾವನ್ನು ನಮ್ಮ ಭಾಷೆಗೆ ರೀಮೇಕ್ ಮಾಡಲು ಪ್ರಯತ್ನಿಸುತ್ತೇವೆ. ಎಲ್ಲರಿಗೂ ಸಿನಿಮಾ ಬಹಳ ಇಷ್ಟವಾಗಿದೆ. ಡಬ್ ಸಿನಿಮಾಗಳನ್ನು ನೋಡುವುದೇ ಬೇರೆ. ನಮ್ಮ ಭಾಷೆಯಲ್ಲಿ ತಯಾರಾಗುವ ಸಿನಿಮಾಗಳನ್ನು ನೋಡುವುದೇ ಬೇರೆ. ಗುಜರಾತಿ ಸಿನಿ ಪ್ರೇಮಿಗಳು ಸ್ವಂತ ಭಾಷೆಯಲ್ಲಿ ಸಿನಿಮೀಯ ಅನುಭವ ಪಡೆಯಬೇಕು ಎಂಬ ಕಾರಣಕ್ಕೆ ನಾವು ಈ ಬ್ಲಾಕ್ಬಸ್ಟರ್ ಸಿನಿಮಾವನ್ನು ಗುಜರಾತಿ ಭಾಷೆಯಲ್ಲಿ ರೀಮೇಕ್ ಮಾಡುತ್ತಿದ್ದೇವೆ' ಎನ್ನುತ್ತಾರೆ ಜಾನಿ ಬ್ರದರ್ಸ್.
'ಬಾಹುಬಲಿ' ಚಿತ್ರದಲ್ಲಿ ತಮನ್ನಾ ಭಾಟಿಯಾ ಆದರೂ ಅಷ್ಟು ದೊಡ್ಡ ಬಜೆಟ್ ಸಿನಿಮಾವನ್ನು ಗುಜರಾತಿ ಭಾಷೆಯಲ್ಲಿ ನಿಜಕ್ಕೂ ಮಾಡಲು ಸಾಧ್ಯಾನಾ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ. ಅಲ್ಲದೆ ಗುಜರಾತಿ ಜನರು ಈ ಸಿನಿಮಾವನ್ನು ಈಗಾಗಲೇ ಹಿಂದಿ ಭಾಷೆಯಲ್ಲಿ ನೋಡಿರುವಾಗ ಮತ್ತೆ ಗುಜರಾತಿ ಭಾಷೆಯಲ್ಲಿ ಮಾಡುವ ಅಗತ್ಯವಾದರೂ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಅಮಿತಾಬ್ ಬಚ್ಚನ್ ಜೊತೆ ಜಾನಿ ಬ್ರದರ್ಸ್