ಕರ್ನಾಟಕ

karnataka

ETV Bharat / sitara

ಮೇಷ್ಟ್ರು ಮಗ ದೊಡ್ಡ ಸಾಧನೆ ಮಾಡುತ್ತಿದ್ದಾನೆ : ಮಗನ ಬಗ್ಗೆ ಡಾಲಿ ತಂದೆ ಮೆಚ್ಚುಗೆ - ಡಾಲಿ ಧನಂಜಯ್

ಬಡವ ರಾಸ್ಕಲ್ ಚಿತ್ರವನ್ನು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿ ಗುಜ್ಜರ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿದ್ದಾರೆ. ಶಂಕರ್ ಗುರು ಎಂಬುವರು ಈ ಚಿತ್ರದ ನಿರ್ದೇಶಕ. ಅವರಿಗೆ ಇದು ಚೊಚ್ಚಲ ಸಿನಿಮಾ.

badava rascal

By

Published : Aug 24, 2019, 5:14 PM IST

ನಟ ಭಯಂಕರ ಡಾಲಿ ಧನಂಜಯ್ ಅವರು ನಟಿಸಿ ನಿರ್ಮಿಸುತ್ತಿರುವ 'ಬಡವ ರಾಸ್ಕಲ್' ಚಿತ್ರ ಸೆಟ್ಟೇರಿದೆ. ನಿನ್ನೆ ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಬಂಡೆ ಮಾಹಾಕಾಳಿ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿತು.

ನಟ ಹಾಗೂ ಡಾಲಿ ಆಪ್ತ ಸ್ನೇಹಿತ ಕರಿಚಿರತೆ ದುನಿಯಾ ವಿಜಯ್ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಗೆಳೆಯನ ಚಿತ್ರಕ್ಕೆ ವಿಶ್ ಮಾಡಿದರು. ಅಲ್ಲದೆ ಮಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ ಡಾಲಿ ಧನಂಜಯ್ ಅವರ ತಂದೆ-ತಾಯಿ ಮಗನ ಹೊಸ ಚಿತ್ರಕ್ಕೆ ಶುಭಹಾರೈಸಿದರು. ಈ ವೇಳೆ ಮಗನ ಈ ಸಾಧನೆಗೆ ಹೆಮ್ಮೆ ಪಟ್ಟ ಡಾಲಿ ತಂದೆ, ಒಬ್ಬ ಪ್ರೈಮರಿ ಸ್ಕೂಲ್ ಮೇಷ್ಟ್ರು ಮಗ ಇಂದು ಸಿನಿಮಾ ನಿರ್ಮಾಪಕ ಆಗುತ್ತಿರುವುದು ಖುಷಿ ತಂದಿದೆ. ಬಾಲ್ಯದಲ್ಲಿ ಆತನನ್ನು ಬಡವ ರಾಸ್ಕಲ್ ಎಂದು ಬೈದಿದ್ದು, ಈಗ ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾನೆ ಎಂದು ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಡವ ರಾಸ್ಕಲ್ ಚಿತ್ರದ ಮುಹೂರ್ತ

ಇನ್ನು ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿ ಗುಜ್ಜರ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿದ್ದಾರೆ. ಶಂಕರ್ ಗುರು ಎಂಬುವರು ಈ ಚಿತ್ರದ ನಿರ್ದೇಶಕ. ಅವರಿಗೆ ಇದು ಚೊಚ್ಚಲ ಸಿನಿಮಾ.

ಬಡವ ರಾಸ್ಕಲ್ ಚಿತ್ರಕ್ಕೆ ನಾಯಕಿಯಾಗಿ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಟಿಸುತ್ತಿರುವ ಅಮೃತ ಸೆಲೆಕ್ಟ್ ಆಗಿದ್ದಾರೆ. ಟಗರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಮಾಸ್ತಿ ಈ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಲಿದ್ದು, ಪ್ರೀತಿಯ ರಾಮನ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದೆ.

ಬೆಂಗಳೂರಿನ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಯಲಿದ್ದು, ಈ ವರ್ಷದ ಅಂತ್ಯಕ್ಕೆ ಬಡವ ರಾಸ್ಕಲ್​​​ನನ್ನು ತೆರೆಮೇಲೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ABOUT THE AUTHOR

...view details