ನಾವು ಎಷ್ಟೇ ಮೇಲಕ್ಕೆ ಬೆಳೆದರೂ ನಮ್ಮ ಮೂಲ ಹಾದಿಯನ್ನು ಮರೆಯಬಾರದು ಅಂತ ತಿಳಿದವರು, ಜ್ಞಾನಿಗಳು ಹೇಳ್ತಾರೆ. ಆದ್ರೆ ಕೆಲವರು ತಮಗೆ ಐಶ್ವರ್ಯ ಬರ್ತಿದ್ದಂತೆ ತಾವು ಹಿಂದೆ ಹೇಗಿದ್ವಿ ಅನ್ನೋದನ್ನೇ ಮರೆತು ವರ್ತನೆ ತೋರಿಸ್ತಾರೆ. ಇದಕ್ಕೆ ಸಾಕ್ಷಿಯಾಯ್ತು ರಾನು ಮಂಡಲ್ ಈ ನಡೆ.
ಹೌದು ಕಳೆದ ಕೆಲವು ದಿನಗಳ ಹಿಂದೆ ರೈಲ್ವೆ ಸ್ಟೇಷನ್ನಲ್ಲಿ ಹಾಡು ಹಾಡುತ್ತ ಹಣ ಸಂಗ್ರಹ ಮಾಡ್ತಿದ್ದ ರಾನು ಮಂಡಲ್, ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾದ್ರು. ನಂತ್ರ ಇವರ ಕಂಠದ ಸೊಬಗನ್ನು ಕೇಳಿದ ಹಿಮೇಶ್ ಇವರಿಗೆ ಸಿನಿಮಾದಲ್ಲಿ ಹಾಡಲು ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಇದಾದ ಮೇಲೆ ರಾನು ಮಂಜಲ್ ಟೈಮ್ ಬದಲಾಗಿ ಸೆಲೆಬ್ರಿಟಿಯಾದ್ರು. ನಂತ್ರ ರಾನು ಎಲ್ಲಿಗೋದ್ರು ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದೆ ಬರ್ತಾರೆ.