ಹುಬ್ಬಳ್ಳಿ:- ಕಿಚ್ಚಾ ಸುದೀಪ್ ಅಭಿನಯಿಸಿದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ಸೆ.12 ರಂದು ತೆರಗೆ ಬರಲಿದ್ದು, ಅದರಲ್ಲಿ ಅಭಿನಯಿಸಿರುವ ಹುಬ್ಬಳ್ಳಿಯ ಡ್ರಾಮಾ ಜೂನಿಯರ್ ಖ್ಯಾತಿಯ ಬೇಬಿ ಶರ್ವರಿ ಪೈಲ್ವಾನ್ ಚಿತ್ರವನ್ನು ನೋಡುವಂತೆ ಹುಬ್ಬಳ್ಳಿ ಜನತೆಯನ್ನು ಮನವಿ ಮಾಡಿದ್ದಾಳೆ.
ಪೈಲ್ವಾನ್ ಚಿತ್ರ ನೋಡಿ ತನ್ನನ್ನು ಅಶೀರ್ವದಿಸಿ ಎಂದ ಡ್ರಾಮ ಜೂನಿಯರ್ಸ್ ಖ್ಯಾತಿಯ ಬೇಬಿ ಶರ್ವರಿ - baby sharvari
ಕಿಚ್ಚಾ ಸುದೀಪ್ ಅಭಿನಯಿಸಿದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ಸೆ.12 ರಂದು ತೆರಗೆ ಬರಲಿದ್ದು, ಅದರಲ್ಲಿ ಅಭಿನಯಿಸಿರುವ ಹುಬ್ಬಳ್ಳಿಯ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಬೇಬಿ ಶರ್ವರಿ ಪೈಲ್ವಾನ್ ಚಿತ್ರವನ್ನು ನೋಡುವಂತೆ ಮನವಿ ಮಾಡಿದ್ದಾಳೆ.
![ಪೈಲ್ವಾನ್ ಚಿತ್ರ ನೋಡಿ ತನ್ನನ್ನು ಅಶೀರ್ವದಿಸಿ ಎಂದ ಡ್ರಾಮ ಜೂನಿಯರ್ಸ್ ಖ್ಯಾತಿಯ ಬೇಬಿ ಶರ್ವರಿ](https://etvbharatimages.akamaized.net/etvbharat/prod-images/768-512-4380302-1100-4380302-1567982716205.jpg)
2ನೇ ತರಗತಿ ಓದುತ್ತಿರುವ ಶರ್ವರಿ ಈಗಾಗಲೆ 777 ಚಾರ್ಲಿ, ಲಂಬೋದರ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾಳೆ. ಇದೀಗ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಅಭಿನಯ ಮಾಡಿದ್ದು, ಈ ಚಿತ್ರ ಇದೇ ತಿಂಗಳ 12 ರಂದು ತೆರೆಕಾಣಲಿದ್ದು ಹುಬ್ಬಳ್ಳಿ ಜನತೆ ತಮ್ಮ ಸಿನಿಮಾವನ್ನು ನೋಡಿ ಆಶೀರ್ವದಿಸಬೇಕು ಎಂದು ಬೇಬಿ ಶರ್ವರಿ ಮನವಿ ಮಾಡಿಕೊಂಡಿದ್ದಾಳೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಅಧ್ಯಕ್ಷ ಮನೋಜಕುಮಾರ, ಶರ್ವರಿ ಚಿಕ್ಕ ವಯಸ್ಸಿಗೆ ದೊಡ್ಡ ದೊಡ್ಡ ನಟರೊಡನೆ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿರುವು ಹೆಮ್ಮೆ ತರುವ ವಿಷಯವಾಗಿದೆ. ಇನ್ನು ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ನಮ್ಮ ಹುಬ್ಬಳ್ಳಿಗೆ ಹೆಸರು ತರಲಿ , ಅವಳ ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿಂಗಪ್ಪ ಜಕ್ಲಿ, ಬಸವರಾಜ ವಾಲಿ, ಶಮ್ ಸುದ್ದೀನ ಹುಬ್ಬಳ್ಳಿ, ವೆಂಕಟೇಶ ಪ್ಯಾಟಿ, ಸುಭಾಶ ಕಾಟಕರ, ಜಗದೀಶ್ ಮುಧೋಳ, ಅನಿಲ ಪಾಟೀಲ, ಬೇಬಿ ಶರ್ವರಿ ತಂದೆ ವೀರಭದ್ರಪ್ಪ, ತಾಯಿ ನಾಗವೇಣಿ ಇದ್ದರು.