ಬಾಲಿವುಡ್ನ ದಿವಂಗತ ನಟ ಇರ್ಫ್ರಾನ್ ಖಾನ್ ಹಿರಿಯ ಪುತ್ರ ಬಬಿಲ್ ತಮ್ಮ ತಂದೆಯ ಜೊತೆಗಿನ ಅಪರೂಪದ ಫೋಟೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಅಪ್ಪನ ಜೊತೆ ಕಳೆದ ಸಮಯದ ಅನುಭವಗಳನ್ನು ಸಾಲುಗಳ ಮೂಲಕ ಹಂಚಿಕೊಂಡಿದ್ದಾರೆ.
ಬಬಿಲ್ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ಇರ್ಫಾನ್ ಮತ್ತು ಬಬಿಲ್ ಜೊತೆಗೆ ಕುಳಿತಿದ್ದಾರೆ. ಈ ಫೋಟೋ ಹಾಕಿ ಬರೆದಿರುವ ಬಬಿಲ್, ನಮಗೆ ಹತ್ತಿರವಾಗಿರುವವರ ಸಾವು ನೀಡುವ ನೋವು ಬಹಳ ದುಃಖ ತರುತ್ತದೆ. ಆದರೆ, ಸಾವು ಪ್ರಾರಂಭ ಎಂದು ನೀವು ಕಲಿಸಿದ್ದೀರಿ. ನಿಮ್ಮ ಜೀವನವನ್ನು ನನ್ನ ಮನಸ್ಸಿನಲ್ಲೇ ಸಂಭ್ರಮಿಸುತ್ತ ಬದುಕುತ್ತೇನೆ ಎಂದು ಬರೆದಿದ್ದಾರೆ.