ಹೈದರಾಬಾದ್: ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ಅವರ ಕುಟುಂಬ ಸದಸ್ಯರು ಎರಡು ವಾರದ ಬಳಿಕ ಕೋವಿಡ್ನಿಂದ ಗುಣಮುಖರಾಗಿದ್ದಾರೆ.
ಬಾಹುಬಲಿ ನಿರ್ದೇಶಕ ರಾಜಮೌಳಿ, ಕುಟುಂಬಸ್ಥರು ಕೊರೊನಾದಿಂದ ಗುಣಮುಖ - ನಿರ್ದೇಶಕ ರಾಜಮೌಳಿ
ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರು ಕೊರೊನಾದಿಂದ ಗುಣಮುಖರಾಗಿದ್ದು, ಹೋಂ ಕ್ವಾರಂಟೈನ್ನಲ್ಲಿದ್ದಾರೆ.
ಬಾಹುಬಲಿ ನಿರ್ದೇಶಕ ರಾಜಮೌಳಿ
ಈ ಕುರಿತು ಬರೆದುಕೊಂಡಿರುವ ರಾಜಮೌಳಿ, ಎರಡು ವಾರ ಹೋಂ ಕ್ವಾರಂಟೈನ್ ಮುಗಿಸಿದ್ದೇವೆ. ಸದ್ಯ ಯಾವುದೇ ಲಕ್ಷಣಗಳಿಲ್ಲ. ಆದ್ರೂ ಟೆಸ್ಟ್ ಮಾಡಿಸಿದ್ದು, ನೆಗೆಟಿವ್ ಬಂದಿದೆ. ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುವುದನ್ನು ಪರೀಕ್ಷಿಸಲು ಮೂರು ವಾರಗಳು ಬೇಕಿದೆ. ಆ ಬಳಿಕ ಪ್ಲಾಸ್ಮಾ ಕೊಡಲು ಸಾಧ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದ್ದರಿಂದ ಪ್ಲಾಸ್ಮಾ ಕೊಡಲು ಮೂರು ವಾರ ಕಾಯಬೇಕು ಎಂದು ಪೋಸ್ಟ್ ಮಾಡಿದ್ದಾರೆ.
ತಮಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಜು.29ರಂದು ಟ್ವಿಟ್ಟರ್ನಲ್ಲೇ ನಿರ್ದೇಶಕರು ಹೇಳಿಕೊಂಡಿದ್ದರು.