ಕರ್ನಾಟಕ

karnataka

ETV Bharat / sitara

'ಡಾಕ್ಟರ್ ಜಿ' ಸಿನಿಮಾದ ಫಸ್ಟ್​​​ಲುಕ್ ಹಂಚಿಕೊಂಡ ನಟ ಆಯುಷ್ಮಾನ್ ಖುರಾನಾ - ಆಯುಷ್ಮಾನ್ ಖುರಾನಾ ಮೂವೀಸ್​

ನಟ ಆಯುಷ್ಮಾನ್ ಖುರಾನಾ ತಮ್ಮ ಮುಂದಿನ ಸಿನಿಮಾ 'ಡಾಕ್ಟರ್ ಜಿ'ಯ ಫಸ್ಟ್​​​ಲುಕ್​​ವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

first look of 'Doctor G'
'ಡಾಕ್ಟರ್ ಜಿ' ಸಿನಿಮಾದ ಫಸ್ಟ್​​​ಲುಕ್

By

Published : Jul 20, 2021, 7:13 AM IST

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು, ತಮ್ಮ ಮುಂದಿನ ಸಿನಿಮಾ 'ಡಾಕ್ಟರ್ ಜಿ'ಯ ಫಸ್ಟ್​​​ಲುಕ್​​ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಮತ್ತು ಶೆಫಾಲಿ ಷಾ ನಟಿಸಿರುವ ಈ ಚಿತ್ರದ ಫಸ್ಟ್​​​ಲುಕ್​ ಅನ್ನು ಆಯುಷ್ಮಾನ್, ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ಗೆ 'ಡಾಕ್ಟರ್ ಜಿ ತೈಯಾರ್ ಹೋ ಕಾರ್ ನಿಕ್ಲೆ ಹೈನ್. ಅಬ್ ಹೊಗಿ ಶೂಟಿಂಗ್' ಎಂಬ ಶೀರ್ಷಿಕೆ ನೀಡಿದ್ದಾರೆ.

ಈ ಪೋಸ್ಟರ್‌ನಲ್ಲಿ ಕನ್ನಡಕ ಹಾಗೂ ಕೋಟ್ ಧರಿಸಿ, ಕೈಯಲ್ಲಿ ಪುಸ್ತಕ ಹಿಡಿದಿದ್ದಾರೆ. ಜೊತೆಗೆ ಅವರ ಜೇಬಿನಲ್ಲಿ ಸ್ಟೆತೊಸ್ಕೋಪ್ ಇದೆ. ಜಂಗ್ಲಿ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನಿಮಾ ವೈದ್ಯಕೀಯ ಸಂಸ್ಥೆಯ ಕ್ಯಾಂಪಸ್ ಅನ್ನು ಆಧರಿಸಿದೆ. ಚಿತ್ರದಲ್ಲಿ ಆಯುಷ್ಮಾನ್ ಡಾ. ಉದಯ್ ಗುಪ್ತಾ ಪಾತ್ರದಲ್ಲಿ ನಟಿಸಲಿದ್ದರೆ, ರಕುಲ್ ಡಾ. ಫಾತಿಮಾ ಎಂಬ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ವೈದ್ಯೆ ಡಾ.ನಂದಿನಿ ಪಾತ್ರವನ್ನು ಶೆಫಾಲಿ ನಿರ್ವಹಿಸಲಿದ್ದಾರೆ..

ಇದನ್ನೂ ಓದಿ:'ಫ್ಯಾಮಿಲಿ ಪ್ಯಾಕ್' ಸಿನಿಮಾ ಅಡ್ಡದಲ್ಲಿ ಪವರ್‌ಸ್ಟಾರ್ ದಂಪತಿ

ABOUT THE AUTHOR

...view details