ಕರ್ನಾಟಕ

karnataka

'ಆಯುಷ್ಮಾನ್​​ಭವ' ಚಿತ್ರದ ಟ್ರೇಲರ್​​​​ ರಿಲೀಸ್‌: ಮಾಸ್‌ ಲುಕ್‌ನಲ್ಲಿ ಮಿಂಚಿದ ಶಿವಣ್ಣ

By

Published : Oct 27, 2019, 6:33 PM IST

ಶಿವರಾಜ್​ ಕುಮಾರ್​ ಮತ್ತು ರಚಿತಾ ರಾಮ್​​ ಅಭಿನಯಿಸಿರುವ 'ಆಯುಷ್ಮಾನ್​ಭವ' ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದೆ. ಟ್ರೇಲರ್​ನಲ್ಲಿ ಶಿವಣ್ಣ ಪಕ್ಕಾ ಮಾಸ್​ ಲುಕ್​ನಲ್ಲಿ ಕಾಣಿಸಿದ್ದಾರೆ.

ಶಿವರಾಜ್​ ಕುಮಾರ್​

ಇತ್ತೀಚೆಗೆ ಆಡಿಯೋ ರಿಲೀಸ್​ ಮಾಡಿ ಚಂದನವನದ ದೊಡ್ಡ ದೊಡ್ಡ ತಾರೆಯರನ್ನು ಒಟ್ಟುಗೂಡಿಸಿದ 'ಆಯುಷ್ಮಾನ್​ ಭವ' ಟೀಂ ಇದೀಗ ದೀಪಾವಳಿ ಗಿಫ್ಟ್​ ನೀಡಿದೆ. ದೀಪಾವಳಿ ವಿಶೇಷವಾಗಿ 'ಆಯುಷ್ಮಾನ್​ಭವ' ಟ್ರೇಲರ್​​ ರಿಲೀಸ್​ ಆಗಿದೆ.

ಈ ಟ್ರೇಲರ್​ನಲ್ಲಿ ಶಿವರಾಜ್​ ಕುಮಾರ್​ ಮಾಸ್​​ ಲುಕ್​ನಲ್ಲಿ ಮಿಂಚಿದ್ದು, ಚಿತ್ರ ಸಸ್ಪೆಂಸ್​ ಮತ್ತು ಕುಟುಂಬ ಕೂಡಿ ನೋಡುವ ಸಿನಿಮಾವಾಗಿದೆ. ಶಿವರಾಜ್​​ ಕುಮಾರ್​ಗೆ ರಚಿತಾರಾಮ್​ ಜೋಡಿಯಾಗಿ ನಟಿಸಿದ್ದು, ಸುಹಾಸಿನಿ, ಅನಂತ್​ ನಾಗ್​​​, ಸಾಧು ಕೋಕಿಲ ಸೇರಿದಂತೆ ಬಹುದೊಡ್ಡ ತಾರಾಗಣವೇ ಚಿತ್ರದಲ್ಲಿದೆ.

ಟ್ರೇಲರ್​ನಲ್ಲಿ ಕಾಣಿಸಿರುವ ಹಾಗೆ ಸಿನಿಮಾ ಹಾರರ್​​ ಚಿತ್ರದಂತೆ ಕಾಣುತ್ತದೆ. ಅಲ್ಲದೇ ಈ ಸಿನಿಮಾದಲ್ಲಿ ಶಿವಣ್ಣ ಸಂಗೀತಗಾರನಾಗಿ ಸಂಗೀತದ ಮೂಲಕವೇ ಕಥೆ ಹೇಳುವ ರೀತಿಯಲ್ಲಿದೆ. ಗನ್​​​ ಮತ್ತು ಮಚ್ಚು ಹೆಚ್ಚು ಸದ್ದು ಮಾಡಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆಯ ಸಿಗಲಿದೆ.

ಈ ಚಿತ್ರಕ್ಕೆ ಪಿ ವಾಸು ನಿರ್ದೇಶನವಿದ್ದು, ಬಿ.ಎಸ್​​ ದ್ವಾರಕೀಶ್​​ ಮತ್ತು ಯೋಗೀಶ್​​ ದ್ವಾರಕೀಶ್​ ನಿರ್ಮಾಣ ಮಾಡುತ್ತಿದ್ದಾರೆ. ಇದೇ ನವೆಂಬರ್​​ 1 ಕ್ಕೆ ತೆರೆಗಪ್ಪಳಿಸಿಲು ಸಿನಿಮಾ ರೆಡಿಯಾಗಿದ್ದು, ಟ್ರೇಲರ್​ ನೋಡಿರುವ ಅಭಿಮಾನಿಗಳಿಗೆ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ.

ABOUT THE AUTHOR

...view details