ಪಿ. ವಾಸು ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಡಿಂಪಲ್ ಕ್ವಿನ್ ರಚಿತಾ ರಾಮ್ ಅಭಿನಯದ 'ಆಯುಷ್ಮಾನ್ ಭವ' ಸಿನಿಮಾ ಕಳೆದ ವರ್ಷ ನವೆಂಬರ್ 15 ರಂದು ಬಿಡುಗಡೆಯಾಗಿತ್ತು. ಇನ್ನೂ ಸಿನಿಮಾ ನೋಡಿರದ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್.
ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ಶಿವಣ್ಣ ಅಭಿನಯದ 'ಆಯುಷ್ಮಾನ್ ಭವ' - ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಆಯುಷ್ಮಾನ್ ಭವ
'ಆಯುಷ್ಮಾನ್ ಭವ' ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಇದೇ ಭಾನುವಾರ ಅಂದರೆ ಫೆಬ್ರವರಿ 9 ರಂದು ಸಂಜೆ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಆಯುಷ್ಮಾನ್ ಭವ' ಪ್ರಸಾರವಾಗುತ್ತಿದೆ. ಸಿನಿಮಾವನ್ನು ಮನೆಯಲ್ಲೇ ಕುಳಿತು ಎಂಜಾಯ್ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
![ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ಶಿವಣ್ಣ ಅಭಿನಯದ 'ಆಯುಷ್ಮಾನ್ ಭವ' Ayushman Bhava](https://etvbharatimages.akamaized.net/etvbharat/prod-images/768-512-6004553-thumbnail-3x2-ayushman.jpg)
'ಆಯುಷ್ಮಾನ್ ಭವ' ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಇದೇ ಭಾನುವಾರ ಅಂದರೆ ಫೆಬ್ರವರಿ 9 ರಂದು ಸಂಜೆ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಆಯುಷ್ಮಾನ್ ಭವ' ಪ್ರಸಾರವಾಗುತ್ತಿದೆ. ಸಿನಿಮಾವನ್ನು ಮನೆಯಲ್ಲೇ ಕುಳಿತು ಎಂಜಾಯ್ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ನಿಧಿ ಸುಬ್ಬಯ್ಯ ಕೂಡಾ ನಟಿಸಿದ್ದು, ಸುಮಾರು ಮೂರು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಚಿತ್ರದಲ್ಲಿ ಶಿವಣ್ಣ ಕೃಷ್ಣನ ಪಾತ್ರದಲ್ಲಿ ನಟಿಸಿದ್ದರೆ ರಚಿತಾ ರಾಮ್ ಲಕ್ಷ್ಮಿ ಹಾಗೂ ನಿಧಿ ಸುಬ್ಬಯ್ಯ ಚುಕ್ಕಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ನೀಡಿದ್ದಾರೆ. ದ್ವಾರಕೀಶ್ ಚಿತ್ರ ಬ್ಯಾನರ್ ಅಡಿ ಹಿರಿಯ ನಟ ದ್ವಾರಕೀಶ್ ಹಾಗೂ ಯೋಗೀಶ್ ದ್ವಾರಕೀಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹೆಸರು ಗಳಿಸಲಿಲ್ಲ ಎಂಬುದು ಶಿವಣ್ಣ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಅನಂತ್ ನಾಗ್, ತಮಿಳು ನಟ ಪ್ರಭು ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.