ಕರ್ನಾಟಕ

karnataka

ETV Bharat / sitara

'ಆಯುಷ್ಮಾನ್ ಭವ' ಆಡಿಯೋ ಲಾಂಚ್​​​: ಚಿತ್ರರಂಗದ​​ ದಿಗ್ಗಜರ ಸಮಾಗಮ

ಶಿವರಾಜ್​ ಕುಮಾರ್​ ಮತ್ತು ರಚಿತಾ ರಾಮ್​ ನಟನೆಯ ಯುಷ್ಮಾನ್​ ಭವ ಚಿತ್ರದ ಆಡಿಯೋ ಲಾಂಚ್​ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕನ್ನಡ ಚಿತ್ರರಂಗದ ಹಿರಿಯ ನಟರು ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಆಯುಷ್ಮಾನ್ ಭವ ಆಡಿಯೋ ಲಾಂಚ್​​​

By

Published : Oct 20, 2019, 7:56 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ನಿರ್ದೇಶಕ ಪಿ ವಾಸು ಕಾಂಬಿನೇಷನ್‌ನಲ್ಲಿ ಮೂಡಿಬರ್ತಿರುವ ಬಹು ನಿರೀಕ್ಷೆಯ ಚಿತ್ರ ಆಯುಷ್ಮಾನ್ ಭವ‌. ಸದ್ಯ ಟೀಸರ್‌ನಿಂದಲೇ ವೀಕ್ಷಕರ ಕ್ಯೂರಿಯಾಸಿಟಿ ಹೆಚ್ಚಿಸಿರುವ ಚಿತ್ರದ ಆಡಿಯೋ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ದಿಗ್ಗಜರು ಕಾಣಿಸಿಕೊಂಡರು.

ಆಯುಷ್ಮಾನ್​​ ಭವ ಚಿತ್ರದ ಮೂಲಕ ದ್ವಾರಕೀಶ್ ಬ್ಯಾನರ್ 50 ವರ್ಷ ಪೂರೈಸಿರೋದು ವಿಶೇಷ.

ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ನಟ ದ್ವಾರಕೀಶ್, ಅನಂತ್ ನಾಗ್, ಸಂಗೀತ ನಿರ್ದೇಶಕ ವಿ ಮನೋಹರ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ಪಿ ವಾಸು ಹಾಗು ದ್ವಾರಕೀಶ್ ಕುಟುಂಬ ಆಯುಷ್ಮಾನ್ ಭವ ಧ್ವನಿಸುರುಳಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು.

ಆಯುಷ್ಮಾನ್ ಭವ ಆಡಿಯೋ ಲಾಂಚ್​​​ ಕಾರ್ಯಕ್ರಮ

ಈ ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಹಾಗೆಯೇ ಹಿರಿಯ ನಟ ಅನಂತ್ ನಾಗ್, ಶಿವಾಜಿ ಪ್ರಭು, ಸುಹಾಸಿನಿ ಮಣಿರತ್ನಂ, ನಿಧಿ ಸುಬ್ಬಯ್ಯ, ರವಿಶಂಕರ್ ಮತ್ತು ರಂಗಾಯಣ ರಘು ಸೇರಿದಂತೆ ಬಹುತಾರಾಬಳಗ‌ ಈ ಚಿತ್ರದಲ್ಲಿದೆ.

ABOUT THE AUTHOR

...view details