ಕರ್ನಾಟಕ

karnataka

ETV Bharat / sitara

ನಟಿಯ 'ಅಯೋಗ್ಯ'ದ ಕೆಲಸ: ಸಾಲ ನೀಡಿದವರ ಮೇಲೆ ಹಲ್ಲೆಗೆ ಸುಪಾರಿ ನೀಡಿದಳಾ ನಟಿ? - ಅಯೋಗ್ಯ ನಟಿ ಮೇಲೆ ಎಫ್​​ಐಆರ್ ದಾಖಲು

'ಅಯೋಗ್ಯ' ಸಿನಿಮಾದ ಎರಡನೇ ನಾಯಕಿ, ತಾನು ಸಾಲ ಪಡೆದ ವ್ಯಕ್ತಿಯ ಮೇಲೆ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಎಲ್ಲರ ಮುಂದೆ ಹಣ ಕೇಳಿ ಅವಮಾನ ಮಾಡಿದ್ದಾರೆ ಎಂಬ ಕೋಪದಿಂದ ರಾಜೇಶ್ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಹಲ್ಲೆ ಮಾಡಲು ರೌಡಿಗಳನ್ನು ಕಳಿಸಿದ್ದಾರೆ ಎನ್ನಲಾಗುತ್ತಿದೆ.

'ಅಯೋಗ್ಯ' ನಟಿಯ ಅಯೋಗ್ಯದ ಕೆಲಸ

By

Published : Nov 15, 2019, 2:39 PM IST

ನೀನಾಸಂ ಸತೀಶ್​ ನಟನೆಯ 'ಅಯೋಗ್ಯ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದ್ದು ಸಿನಿಮಾ 100 ದಿನಗಳನ್ನು ಕೂಡಾ ಪೂರೈಸಿತ್ತು. ಮಹೇಶ್ ಕುಮಾರ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಅಂದು ಚಿತ್ರದ ಮೇಕಿಂಗ್ ಸುದ್ದಿಯಲ್ಲಿದ್ದರೆ, ಇದೀಗ ಈ ಸಿನಿಮಾದ ಎರಡನೇ ನಾಯಕಿ ಸುದ್ದಿಯಲ್ಲಿದ್ದಾರೆ.

ಹಲ್ಲೆಗೊಳಗಾದ ರಾಜೇಶ್
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್
ರಾಜೇಶ್ ಮೇಲೆ ರೌಡಿಗಳಿಂದ ಹಲ್ಲೆ

ಸಿನಿಮಾದ ಎರಡನೇ ನಾಯಕಿ, ತಾನು ಸಾಲ ಪಡೆದ ವ್ಯಕ್ತಿಯ ಮೇಲೆ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ನಟಿ , ರಾಜೇಶ್ ಎಂಬ ವ್ಯಕ್ತಿಯಿಂದ ಸಾಲ ಪಡೆದಿದ್ದು, ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಹಲ್ಲೆಗೊಳಗಾದ ರಾಜೇಶ್​ ದೂರು ನೀಡಿದ್ದಾರೆ. ಕೆಲವು ದಿನಗಳ ಹಿಂದೆ ರಾಜೇಶ್ ನಟಿ ಮನೆ ಬಳಿ ಹೋಗಿ ಸಾಲ ವಾಪಸ್ ಕೇಳಿದ್ದಾರೆ. ಎಲ್ಲರ ಮುಂದೆ ಹಣ ಕೇಳಿ ಅವಮಾನ ಮಾಡಿದ್ದಾರೆ ಎಂಬ ಕೋಪದಿಂದ ರಾಜೇಶ್ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಹಲ್ಲೆ ಮಾಡಲು ರೌಡಿಗಳನ್ನು ಕಳಿಸಿದ್ದಾರೆ ಎನ್ನಲಾಗುತ್ತಿದೆ.

ದೂರು ಪ್ರತಿ
ದೂರು ಪ್ರತಿ

ರಾಜೇಶ್ ಉಡುಪಿ ನಿವಾಸಿಯಾಗಿದ್ದು, ಕಳೆದ ಮಂಗಳವಾರ ಮಂಡ್ಯ ಜಿಲ್ಲೆಯ ಬಲಮುರಿಗೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಎರಡು ಬೈಕಿನಲ್ಲಿ ಬಂದ ರೌಡಿಗಳು ಮಾರಕಾಸ್ತ್ರಗಳನ್ನು ಬಳಸಿ ರಾಜೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ರಾಜೇಶ್​ಗೆ ಗಂಭಿರ ಗಾಯಗಳಾಗಿದ್ದು ಮೈಸೂರಿನ ಕೆ. ಆರ್​. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣರಾಜಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಕೆಆರ್​ಎಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ. ನಟಿ , ಹಾಗೂ ಆಕೆ ತಂದೆ ಮೇಲೆ ಕೂಡಾ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಹಣ ಪಡೆದು ಮೋಸ ಮಾಡಿರುವುದು ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೂರು ಪ್ರತಿ
ದೂರು ಪ್ರತಿ

ABOUT THE AUTHOR

...view details