ಕರ್ನಾಟಕ

karnataka

ETV Bharat / sitara

ಶರಣ್-ಆಶಿಕ ಜೋಡಿಯ 'ಅವತಾರ ಪುರುಷ' ಬಿಡುಗಡೆ ದಿನಾಂಕ ಮುಂದಕ್ಕೆ - Simple suni direction Avatara purusha

ಸಿಂಪಲ್ ಸುನಿ ನಿರ್ದೇಶನದಲ್ಲಿ ಶರಣ್ ಹಾಗೂ ಆಶಿಕಾ ನಟಿಸಿರುವ 'ಅವತಾರ ಪುರುಷ' ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದು ಡಿಸೆಂಬರ್​​​ನಲ್ಲಿ ತೆರೆ ಕಾಣಲಿದೆ. ಚಿತ್ರವನ್ನು ಪುಷ್ಕರ್​ ಮಲ್ಲಿಕಾರ್ಜುನಯ್ಯ ನಿರ್ಮಿಸುತ್ತಿದ್ದಾರೆ.

Avatara puruhs release date postponed
'ಅವತಾರ ಪುರುಷ'

By

Published : Sep 16, 2020, 1:36 PM IST

ಚಿತ್ರರಂಗದ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಅಕ್ಟೋಬರ್ 1 ರಿಂದ ಥಿಯೇಟರ್​​ಗಳು ಕೂಡಾ ಓಪನ್ ಆಗುತ್ತಿವೆ. ಮಾರ್ಚ್ 13 ಕ್ಕೂ ಮುನ್ನ ಸ್ಥಗಿತ ಆದ ಸಿನಿಮಾಗಳು ಈಗ ಬಿಡುಗಡೆ ಆಗಲು ಸರತಿ ಸಾಲಿನಲ್ಲಿ ನಿಂತಿವೆ.

ಶರಣ್, ಆಶಿಕಾ ರಂಗನಾಥ್

ಖ್ಯಾತ ನಟರ ಸಿನಿಮಾಗಳ ಪೈಕಿ ಶರಣ್ ಹಾಗೂ ಆಶಿಕ ರಂಗನಾಥ್​ ಅಭಿನಯದ ಅವತಾರ ಪುರುಷ ಡಿಸೆಂಬರ್​​​ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ. ಪುಷ್ಕರ್ ಅವರ ಸಾಲು ಸಾಲು ಸಿನಿಮಾಗಳು ವಿವಿಧ ಹಂತದಲ್ಲಿದೆ. ಅವರು ಕೂಡಾ ಚಿತ್ರದಲ್ಲಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರ್​​ನಲ್ಲಿ ತಯಾರಾಗುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777' ಸಿನಿಮಾ ಕೂಡಾ ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿದೆ. ಅದಕ್ಕೂ ಮುನ್ನ 'ಅವತಾರ ಪುರುಷ' ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದದ್ದು ಸಂಪೂರ್ಣ ಆಗಲಿದೆ. ಹಾಗೆ ನೋಡಿದರೆ ಈ ಚುಟು ಚುಟು ಅಂತೈತಿ....ಖ್ಯಾತಿಯ ಶರಣ್ ಹಾಗೂ ಆಶಿಕ ರಂಗನಾಥ್ ಜೋಡಿಯ ಈ ಸಿನಿಮಾ ಮೇ ತಿಂಗಳಿನಲ್ಲಿ ಬಿಡುಗಡೆ ಎಂದು ನಿಶ್ಚಯ ಆಗಿತ್ತು. ಆದರೆ ಕೊರೊನಾ ಇದಕ್ಕೆ ಅವಕಾಶ ಕೊಡಲಿಲ್ಲ.

'ಅವತಾರ ಪುರುಷ' ಚಿತ್ರದಲ್ಲಿ ಶ್ರೀನಗರ ಕಿಟ್ಟಿ

ಸಿಂಪಲ್ ಸುನಿ ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಅವತಾರ ಪುರುಷ’ ಡಿಸೆಂಬರ್ ಕೊನೆ ವಾರದಲ್ಲಿ ಬಿಡುಗಡೆಗೆ ಸಜ್ಜಾಗಲಿದೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಸುಧಾರಾಣಿ, ಸಾಯಿ ಕುಮಾರ್ ಹಾಗೂ ಇನ್ನಿತರರು ಪಾತ್ರ ನಿರ್ವಹಿಸಿದ್ದಾರೆ. 'ರಂಗಿ ತರಂಗ' ಖ್ಯಾತಿಯ ಛಾಯಾಗ್ರಾಹಕ ವಿಲಿಯಂ ಡೇವಿಡ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಈ ಚಿತ್ರಕ್ಕಿದೆ.

ABOUT THE AUTHOR

...view details