ಕರ್ನಾಟಕ

karnataka

ETV Bharat / sitara

ಹತ್ತಾರು​ ಜಾಹೀರಾತುಗಳು ಸೇರಿ ಮಾಡಿರುವ ಹಾಡೇ ಅವತಾರ ಪುರುಷದ ‘ಲಡ್ಡು ಬಂದು ಬಾಯಿಗೆ ಬಿತ್ತಾ?‘ - ಅವತಾರ ಪುರುಷ ಚಿತ್ರದ ಬಿಡುಗಡೆ ದಿನಾಂಕ,

ಟ್ರೈಲರ್ ಹಾಗೂ ಟೈಟಲ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ ಅವತಾರ ಪುರುಷ. ಸ್ಯಾಂಡಲ್​ವುಡ್​ನಲ್ಲಿ ಕಾಮಿಡಿ ಅಧ್ಯಕ್ಷ ಅಂತಾ ಬ್ಯಾಂಡ್ ಆಗಿರುವ ಶರಣ್, ಹತ್ತಾರು ಅವತಾರಗಳಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಸಿನಿಮಾವಿದು.

Avatar Purusha movie song release, Avatar Purusha movie Laddoo Song release, Avatar Purusha movie release date, Avatar Purusha movie update, ಅವತಾರ ಪುರುಷ ಚಿತ್ರದ ಹಾಡು ಬಿಡುಗಡೆ, ಅವತಾರ ಪುರುಷ ಚಿತ್ರದ ಲಡ್ಡೂ ಸಾಂಗ್​ ರಿಲೀಸ್​, ಅವತಾರ ಪುರುಷ ಚಿತ್ರದ ಬಿಡುಗಡೆ ದಿನಾಂಕ, ಅವತಾರ ಪುರುಷ ಚಿತ್ರದ ಅಪ್​ಡೇಟ್​,
ಅವತಾರ ಪುರುಷ

By

Published : Nov 30, 2021, 9:16 AM IST

ನಿರ್ದೇಶಕ ಸಿಂಪಲ್ ಸುನಿ ಹಾಗೂ ಶರಣ್ ಕಾಂಬಿನೇಷನ್​ನಲ್ಲಿ ಮೂಡಿ ಬರ್ತಾ ಇರೋ ಅವತಾರ ಪುರುಷ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಒಂದಲ್ಲ ಒಂದು ವಿಷಯಕ್ಕೆ ಸದ್ದು ಮಾಡುತ್ತಿದೆ. ಇದೀಗ ಶರಣ್ ಹಾಗೂ ಆಶಿಕಾ ಕಾಂಬಿನೇಷನ್‌ ಲಡ್ಡು ಹಾಡು ಪುಷ್ಕರ್ ಫಿಲ್ಮ್ಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಈ ಸಾಂಗ್​ ನೋಡಿದವರು ಅವರಿಗೆ ಕಂಡಿತವಾಗಿಯೂ ಪಾಪೂಲರ್ಸ ಜಾಹೀರಾತುಗಳು ನೆನಪಿಗೆ ಬರುತ್ತವೆ.

‘ಲಡ್ಡು ಬಂದು ಬಾಯಿಗೆ ಬಿತ್ತಾ?’ ಎಂಬ ಹಾಡು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಂಪ್ರೇಸ್ ಮಾಡುತ್ತಿದೆ. ಈ ಹಾಡು ಹತ್ತಾರು ಆ್ಯಡ್​ಗಳನ್ನು ಒಳಗೊಂಡಿದೆ. ನಿರ್ದೇಶಕ ಸಿಂಪಲ್ ಸುನಿ ಬರೆದಿರೋ ಸಾಹಿತ್ಯಕ್ಕೆ, ಗಾಯಕ ನಿಹಾಲ್ ಟೌರೊ ಧ್ವನಿಯಾಗಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಈ ಹಾಡಿಗೆ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಇನ್ನು ಈ ಹಾಡಿನಲ್ಲಿ ಶರಣ್ ಹಾಗೂ ಆಶಿಕಾ ರಂಗನಾಥ್ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿದೆ. ಮತ್ತೊಂದು ಕಡೆ ಸಿನಿಮಾ ಪ್ರಿಯರಿಂದ ಲಡ್ಡು ಹಾಡಿಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗಾಗ್ಲೇ ಪೋಸ್ಟರ್ ಹಾಗೂ ಟ್ರೈಲರ್ ನೋಡಿದಾಗ ಇದೊಂದು ಬ್ಲಾಕ್‌ ಮ್ಯಾಜಿಕ್‌ ಕತೆ ಅನಿಸುತ್ತೆ. ಕಾಮಿಡಿ ಜೊತೆಗೆ ಬ್ಲಾಕ್‌ ಮ್ಯಾಜಿಕ್‌ ಅಂಶಗಳ ಸುತ್ತ ಈ ಸಿನಿಮಾ ಸಾಗಲಿದೆ. ಶರಣ್ ಹಾಗೂ ಆಶಿಕಾ ರಂಗನಾಥ್ ಅಲ್ಲದೇ, ಈ ಚಿತ್ರದಲ್ಲಿ ಸಾಯಿಕುಮಾರ್‌, ಶ್ರೀನಗರ ಕಿಟ್ಟಿ, ಸುಧಾರಾಣಿ, ಸಾಧುಕೋಕಿಲ, ಭವ್ಯ, ಅಯ್ಯಪ್ಪ ಸೇರಿದಂತೆ ಸಾಕಷ್ಟು ಕಲಾವಿದರ ದಂಡೇ ಇದೆ.

ಇನ್ನು ಅವತಾರ ಪುರುಷ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ತರಲು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿದ್ಧತೆ ನಡೆಸಿದ್ದಾರೆ. ಅವತಾರ ಪುರುಷ ಪಾರ್ಟ್ ಒನ್ ಹಾಗೂ ಅವತಾರ ಪುರುಷ ಪಾರ್ಟ್ 2 ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಟ್ಯಾಗ್‌ಲೈನ್ ಮಾತ್ರ ಬೇರೆ ಬೇರೆ ಇಡಲಾಗುತ್ತಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ.

ಇನ್ನು ಈ ಚಿತ್ರವನ್ನ ಪುಷ್ಕರ್ ಫಿಲಂಸ್ ಬ್ಯಾನರ್‌ ಅಡಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರಂತೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಈ ಸಿನಿಮಾಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಇನ್ನು ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ ಅವತಾರ ಪುರುಷ ಚಿತ್ರಕ್ಕಿದೆ.

ನಿರ್ದೇಶಕ ಸಿಂಪಲ್ ಸುನಿ ಹಾಗೂ ಶರಣ್ ಜುಗಲ್ ಬಂಧಿಯಲ್ಲಿ ಮೂಡಿ ಬರ್ತಿರೋ ಅವತರಾ ಪುರಷ ಸಿನಿಮಾ ಡಿಸೆಂಬರ್ 10ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ. ಶರಣ್ ಹತ್ತಾರು ವೇಷಗಳಿಗೆ ಸಿನಿಮಾ ಪ್ರೇಕ್ಷಕರು ರಿಯಾಕ್ಷನ್ ಹೇಗಿರುತ್ತೆ ಕಾದು ನೋಡಬೇಕು.

ABOUT THE AUTHOR

...view details