ಕರ್ನಾಟಕ

karnataka

ETV Bharat / sitara

ಶ್ರೀಮನ್ನಾರಾಯಣನ 'ಹ್ಯಾಂಡ್ಸ್​​ ಅಪ್'​​ ಹಾಡಿಗೆ ಹ್ಯಾಟ್ಸ್ ಆಫ್​ ಹೇಳಿದ ಅಭಿಮಾನಿಗಳು - ಅವನೇ ಶ್ರೀಮನ್ನಾರಾಯಣ ವಿಡಿಯೋ ಹಾಡು ಬಿಡುಗಡೆ

'ಅವನೇ ಶ್ರೀಮನ್ನಾರಾಯಣ' ಚಿತ್ರದ ವಿಡಿಯೋ ಹಾಡೊಂದು ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿದ್ದಾರೆ. 'ಕೇಳಿ ಕಾದಿರುವ ಬಾಂಧವರೆ..ಭುವಿಯಲ್ಲಿ ಅವನ ಅರಿತವರೆ' ಎಂಬ ಸಾಲಿನಿಂದ ಆರಂಭವಾಗುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ಸಂಗಡಿಗರು ಹಾಡಿದ್ದಾರೆ.

Hands up song
'ಹ್ಯಾಂಡ್ಸ್​​ ಅಪ್'​​ ಹಾಡು

By

Published : Dec 13, 2019, 6:13 PM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಇದೇ ತಿಂಗಳು 27 ರಂದು ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಟ್ರೇಲರ್ ನೋಡಿದ ಮೇಲಂತೂ ಅಭಿಮಾನಿಗಳು ಸಿನಿಮಾ ನೋಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಇನ್ನು 'ಅವನೇ ಶ್ರೀಮನ್ನಾರಾಯಣ' ಚಿತ್ರದ ವಿಡಿಯೋ ಸಾಂಗ್​ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿದ್ದಾರೆ. 'ಕೇಳಿ ಕಾದಿರುವ ಬಾಂಧವರೆ..ಭುವಿಯಲ್ಲಿ ಅವನ ಅರಿತವರೆ' ಎಂಬ ಸಾಲಿನಿಂದ ಆರಂಭವಾಗುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ಸಂಗಡಿಗರು ಹಾಡಿದ್ದಾರೆ. ಚಿತ್ರದ ಹಾಡುಗಳಿಗೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪುಷ್ಕರ್ ಫಿಲ್ಮ್ಸ್​​​ ಬ್ಯಾನರ್ ಅಡಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಹೆಚ್​​​.ಕೆ. ಪ್ರಕಾಶ್​​ ಸಿನಿಮಾವನ್ನು ನಿರ್ಮಿಸಿದ್ದರೆ ಸಚಿನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 'ಹ್ಯಾಂಡ್ಸ್​ ಅಪ್ ಹಾಡಿಗೆ ಅಭಿಮಾನಿಗಳು ಹ್ಯಾಟ್ಸ್ ಆಫ್ ಹೇಳಿದ್ದು ಈ ಹಾಡು ಟ್ವಿಟ್ಟರ್​​ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.

For All Latest Updates

ABOUT THE AUTHOR

...view details