ಕರ್ನಾಟಕ

karnataka

ETV Bharat / sitara

ಚಂದನವನದ ತಾರೆಗಳಿಗೆ 'ಅವನೇ ಶ್ರೀಮನ್ನಾರಾಯಣ'ನ ದರ್ಶನ: ಚಿತ್ರದ ಬಗ್ಗೆ ಶಿವಣ್ಣ, ರವಿಚಂದ್ರನ್‌ ಹೇಳಿದ್ದು..

ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯದ ಬಹುನಿರಿಕ್ಷೀತ ಚಿತ್ರ " ಅವನೇ ಶ್ರೀಮನ್ನಾರಾಯಣ" ಚಿತ್ರ ಬಿಡುಗಡೆಗೆ ಮುನ್ನ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳಿಗೆ ನಾರಾಯಣ ದರ್ಶನ ಕೊಟ್ಟಿದ್ದಾನೆ.

avane srimannarayana celebrity reaction , ಅವನೇ ಶ್ರೀಮನ್ನಾರಾಯಣ ಬಗ್ಗೆ ಶಿವಣ್ಣ ಹೇಳಿಕೆ
ಸೆಲೆಬ್ರೆಟಿಗಳಿಂದ ಅವನೇ ಶ್ರೀಮನ್ನಾರಾಯಣ ಚಿತ್ರ ವೀಕ್ಷಣೆ

By

Published : Dec 27, 2019, 8:19 AM IST

ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯದ ಬಹುನೀರಿಕ್ಷೀತ ಚಿತ್ರ " ಅವನೇ ಶ್ರೀಮನ್ನಾರಾಯಣ" ಚಿತ್ರದ ಬಿಡುಗಡೆಗೆ ಮುನ್ನ ಸ್ಯಾಂಡಲ್​ವುಡ್‌ ಸೆಲೆಬ್ರಿಟಿಗಳಿಗೆ ನಾರಾಯಣ ದರ್ಶನ ಕೊಟ್ಟಿದ್ದಾನೆ.

ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿಗಾಗಿ ಚಿತ್ರತಂಡ‌‌ ಬಾಲಿವುಡ್ ಸ್ಟೈಲ್​ನಲ್ಲಿ ರೆಡ್ ಕಾರ್ಪೆಟ್ ಸೆಲೆಬ್ರಿಟಿ ಶೋ ಅರೇಂಜ್ ಮಾಡಿತ್ತು. ಈ ಶೋಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ಆಶಿಕಾ ರಂಗನಾಥ್, ಅನುಷಾ ರಂಗನಾಥ್ ಹಾಗೂ ಚಿತ್ರತಂಡ ಸೇರಿದಂತೆ ಸ್ಯಾಂಡಲ್​ವುಡ್​ನ ಬಹುತೇಕ ನಟರು ಆಗಮಿಸಿ ಅವನೇ ಶ್ರೀಮನ್ನಾರಾಯಣ ಚಿತ್ರ ನೋಡಿದ್ರು.

ಅವನೇ ಶ್ರೀಮನ್ನಾರಾಯಣ ಸೆಲೆಬ್ರಿಟಿ ಶೋನಲ್ಲಿ ಪಾಲ್ಗೊಂಡ ಚಂದನವನದ ತಾರೆಯರು.

ಚಿತ್ರದ ಮೇಕಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವಣ್ಣ, ರಕ್ಷಿತ್ ಶೆಟ್ಟಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರ ತುಂಬಾ ರಿಚ್ ಆಗಿ ಮೂಡಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ನಾವು ಸಾಮಾನ್ಯವಾಗಿ ಇಂಥ ಸಿನಿಮಾ ನೋಡುವಾಗ ತಪ್ಪು ಹುಡುಕುವ ಕೆಲಸ ಮಾಡುತ್ತೇವೆ. ಆದ್ರೆ ಈ ಚಿತ್ರ ಆರಂಭದಿಂದಲೇ ಅದ್ಭುತವಾಗಿ ಟೇಕಾಫ್ ಆಗಿದೆ. ಇದು ಕನ್ನಡಕ್ಕೆ ವಿಶೇಷವಾದ ಸಿನಿಮಾ ಎಂದು ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ರು.

ಚಿತ್ರ ಇವತ್ತು ಸುಮಾರು 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ 300ಕ್ಕೂ ಹೆಚ್ಚು ಶೋಗಳು ಮಲ್ಟಿಪ್ಲೆಕ್ಸ್​ಗಳಲ್ಲಿ ಹೌಸ್‌ಫುಲ್ ಆಗಿದೆ. ಚಿತ್ರದ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಖಂಡಿತವಾಗಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುವ ನಂಬಿಕೆ ಇದೆ ಎಂಬ ವಿಶ್ವಾಸವನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ವ್ಯಕ್ತಪಡಿಸಿದ್ರು.

ABOUT THE AUTHOR

...view details