ಕರ್ನಾಟಕ

karnataka

ETV Bharat / sitara

ಅವನೇ ಶ್ರೀಮನ್ನಾರಾಯಣನಿಗೆ ಕತ್ತರಿ ಹಾಕುತ್ತಾ ಚಿತ್ರತಂಡ? - Avane Sriman Narayana

ಅವನೇ ಶ್ರೀಮನ್ನಾರಾಯಣ ಸಿನಿಮಾದ ಅವಧಿ 3 ಗಂಟೆ 6 ನಿಮಿಷ ಇದೆ. ಸಿನಿಮಾ ನೋಡಿದ ಮಂದಿ ಫಸ್ಟ್ ಆಫ್ ಚೆನ್ನಾಗಿದೆ ಹಾಗೂ ಸೆಕೆಂಡ್ ಆಫ್ ಮಂದಗತಿಯಲ್ಲಿ ಸಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದ್ರಿಂದ ಚಿತ್ರದಲ್ಲಿ 26 ನಿಮಿಷ ತೆಗೆಯಲು ಪ್ಲಾನ್ ಮಾಡಲಾಗಿದೆಯಂತೆ.

Avane Sriman Narayana team plane to trim the movie
ಅವನೇ ಶ್ರೀಮನ್ನಾರಾಯಣನಿ

By

Published : Dec 28, 2019, 10:38 PM IST

ಸಿಂಪಲ್ ಸ್ಟಾರ್ ರಕ್ಷಿತ್​ ಶೆಟ್ಟಿ ಅಭಿನಯಿಸಿರುವ, ಸಚಿನ್​ ರವಿ ನಿರ್ದೇಶನದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ‌ ಪ್ರೇಕ್ಷಕರ ಮುಂದೆ ಬಂದಿದೆ. ಸಿನಿಮಾ‌ ನೋಡಿದ ಅದೆಷ್ಟೋ ಪ್ರೇಕ್ಷಕ ಪ್ರಭುಗಳು ಇದೊಂದು ಫ್ಯಾಂಟಸಿ ಸಿನಿಮಾ ಆಗಿದ್ದು, ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನ ಅಂತಿದ್ದಾರೆ.

ಆದರೆ ಈ ಮಧ್ಯೆ ಅವನೇ ಶ್ರೀಮನ್ನಾರಾಯಣ ಸಿನಿಮಾದ ಅವಧಿ 3 ಗಂಟೆ 6 ನಿಮಿಷ ಇದೆ. ಸಿನಿಮಾ ನೋಡಿದ ಮಂದಿ ಫಸ್ಟ್ ಆಫ್ ಚೆನ್ನಾಗಿದೆ ಹಾಗೂ ಸೆಕೆಂಡ್ ಆಫ್ ಮಂದಗತಿಯಲ್ಲಿ ಸಾಗುತ್ತದೆ ಎಂದು ಹೇಳುತ್ತಿದ್ದಾರೆ.

ಈ ಬಗ್ಗೆ ಚಿತ್ರತಂಡದ ಗಮನಕ್ಕೆ ಬಂದಿದ್ದು, ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ 26 ನಿಮಿಷ ತೆಗೆಯಲು ಪ್ಲಾನ್ ಮಾಡಲಾಗಿದೆಯಂತೆ. ಈ ಬಗ್ಗೆ ನಿರ್ದೇಶಕ ಸಚಿನ್ ರವಿ, ರಕ್ಷಿತ್ ಶೆಟ್ಟಿ, ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನ್ ಚರ್ಚೆ ನಡೆಸಿದ್ದು, ಯಾವ ಯಾವ ಸನ್ನಿವೇಶಗಳಿಗೆ ಕತ್ತರಿ ಹಾಕಬೇಕು ಅನ್ನೋದು ಚಾಲೆಂಜಿಂಗ್ ಆಗಿದೆ ಎನ್ನಲಾಗುತ್ತಿದೆ.

ಅವನೇ ಶ್ರೀಮನ್ನಾರಾಯಣ

ಸಿನಿಮಾದಲ್ಲಿ 26 ನಿಮಿಷವನ್ನ ಟ್ರಿಮ್ ಮಾಡಿದರೆ 2 ಗಂಟೆ 36 ನಿಮಿಷ ಆಗುತ್ತೆ. ಆಗ ಅವನೇ ಶ್ರೀಮನ್ನಾರಾಯಣ ಸಿನಿಮಾಕ್ಕೆ ಡ್ಯುರೇಷನ್ ಕಡಿಮೆಯಾಗಿ ಮತ್ತಷ್ಟು ಸಿನಿಮಾ ಪ್ರಿಯರು ಚಿತ್ರ ಮಂದಿರಗಳ ಕಡೆ ಬರುತ್ತಾರೆ ಎಂಬುದು ಚಿತ್ರತಂಡ ಮತ್ತು ಸಿನಿಮಾ ವಿಮರ್ಶಕರ ಪ್ಲಾನ್​ ಆಗಿದೆ ಎನ್ನಲಾಗುತ್ತಿದೆ.

ABOUT THE AUTHOR

...view details