ಕರ್ನಾಟಕ

karnataka

ETV Bharat / sitara

ಹೊಸ ಟ್ರೇಲರ್​ ಮೂಲಕ ಬರ್ತಿದ್ದಾನೆ 'ಅವನೇ ಶ್ರೀಮನ್ನಾರಾಯಣ'.. ಬಿಡುಗಡೆ ಯಾವತ್ತು?

ಅವನೇ ಶ್ರೀಮನ್ನಾರಾಯಣ ಸಿನಿಮಾದ ಹೊಸ ಟ್ರೇಲರ್​ ಅನ್ನು ಇದೇ25ಕ್ಕೆ ರಿಲೀಸ್​​ ಮಾಡಲಾಗುತ್ತದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವತ್ಸ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

'ಅವನೇ ಶ್ರೀಮನ್ನಾರಾಯಣ' ಪೋಸ್ಟರ್​​​

By

Published : Nov 11, 2019, 10:11 PM IST

ಈ ವರ್ಷದ ಕೊನೆಯಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾ ‘ಅವನೇಶ್ರೀಮನ್ನಾರಾಯಣ’. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವತ್ಸ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹೊಸ ಟ್ರೇಲರ್​ ಅನ್ನು ಇದೇ ತಿಂಗಳ 25 ರಂದು ಬಿಡುಗಡೆ ಮಾಡಿ ಅಲ್ಲಿಂದ ಸಿನಿಮಾ ಪ್ರಚಾರ ಕಾರ್ಯ ಆರಂಭಿಸಲು ಚಿತ್ರ ತಂಡ ನಿರ್ಧರಿಸಿದೆ.

ನಂತರ ಕೆಲವು ಹಾಡುಗಳ ತುಣುಕುಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಲಿದೆ. ಸಿನಿಮಾ ಬಿಡುಗಡೆಗೆ ಒಂದು ತಿಂಗಳ ಹಿಂದಿನಿಂದ ಪ್ರಚಾರ ಕಾರ್ಯ ಪ್ರಾರಂಭವಾಗುತ್ತದೆ ಎಂದು ಈಗಾಗಲೇ ಚಿತ್ರತಂಡದ ತಿಳಿಸಿತ್ತು.

'ಅವನೇ ಶ್ರೀಮನ್ನಾರಾಯಣ' ಚಿತ್ರ ತಂಡ

‘ಕಿರಿಕ್ ಪಾರ್ಟಿ’ ನಂತರ ಬಿಡುಗಡೆ ಆಗುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ಇದು. ಈ ಚಿತ್ರದಲ್ಲಿ ರಕ್ಷಿತ್​​ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ತನ್ನ ಸ್ವಂತ ಶಕ್ತಿಯಿಂದ ಜನರ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡುತ್ತಾನೆ ಎಂಬುದು ಚಿತ್ರದ ಮುಖ್ಯಾಂಶ.

ಸಿನಿಮಾಕ್ಕೆ ಚರಣ್ ರಾಜ್ ಮತ್ತು ಅಜನಿಷ್ ಲೋಕೇಶ್ ಸಂಗೀತ, ಕರಾಮ್ ಚಾವ್ಲ ಛಾಯಾಗ್ರಹಣವಿದ್ದು, ಎಚ್​​.ಕೆ ಪ್ರಕಾಶ್​, ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಇನ್ನು ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಹಾಗೂ ಇತರರು ಅಭಿನಯಿಸಿದ್ದಾರೆ.

ABOUT THE AUTHOR

...view details