ಅವನೇ ಶ್ರೀಮನ್ನಾರಾಯಣ ಸಿನಿಮಾ ತಂಡ ಒಂದರ ಹಿಂದೊಂದು ಹೊಸ ಹೊಸ ಸುದ್ದಿಯನ್ನು ನೀಡುತ್ತಾ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಒಂದು ದಿನದ ಹಿಂದೆ ಹ್ಯಾಂಡ್ಸ್ ಅಪ್ ಎಂಟ್ರಿ ಸಾಂಗ್ ರಿಲೀಸ್ ಮಾಡಿದ್ದ ಚಿತ್ರ ತಂಡ, ಇದೀಗ ಮತ್ತೊಂದು ಸುದ್ದಿ ಕೊಟ್ಟಿದೆ.
ಹೌದು ಅವನೇ ಶ್ರೀಮನ್ನಾರಾಯಣ ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್ನಿಂದ U/A ಸರ್ಟಿಫಿಕೇಟ್ ಸಿಕ್ಕಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.