ಬೆಂಗಳೂರು: ಸ್ಯಾಂಡಲ್ವುಡ್ ನಟ ಕೋಮಲ್ ಕುಮಾರ್ ಮೇಲೆ ಮಲ್ಲೇಶ್ವರಂ ಬಳಿಯ ಟ್ರಾಫಿಕ್ ಸಿಗ್ನಲ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದು, ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರ ಸಹೋದರ, ನಟ ಜಗ್ಗೇಶ್ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ದಾದಾಗಿರಿ ಮಾಡಿದವರನ್ನು ಸುಮ್ಮನೆ ಬಿಡಲ್ಲ.. ಗರುಡಗಂಭದಂತೆ ನಾನಿರುವೆ: ಕೋಮಲ್ ಹಲ್ಲೆಗೆ ಜಗ್ಗೇಶ್ ಪ್ರತಿಕ್ರಿಯೆ - ಕೋಮಲ್ ಕುಮಾರ್ ಮೇಲೆ ಹಲ್ಲೆ
ದಾದಾಗಿರಿ ಮಾಡಿದವರನ್ನ ಸುಮ್ಮನೆ ಬಿಡಲ್ಲ, ನನ್ನ ಸಹೋದರನ ಮೇಲೆ ಹಲ್ಲೆ ಮಾಡಿದವರಿಗೆ ಬುದ್ಧಿಕಲಿಸಲು ನಮ್ಮ ಅದ್ಭುತ ಆರಕ್ಷಕರಿದ್ದಾರೆ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಮೃದು ಸ್ವಭಾವದ ತಮ್ಮ ಮಗಳನ್ನಟ್ಯೂಷನ್ಗೆಬಿಡಲು ಹೋಗುವಾಗ ಟ್ರಾಫಿಕ್ ಸಮಸ್ಯೆಗೆ ಕುಡಿದ ಯುವಕ ತನ್ನ ಜೊತೆಯಿದ್ದ ಪ್ರೇಯಸಿ ಮೆಚ್ಚಿಸಲು ವಿಪರೀತವಾಗಿ ಹಲ್ಲೆ ಮಾಡಿದ್ದಾನೆ!ಪರವಾಗಿಲ್ಲಾ ಇಂಥವರಿಗೆ ಬುದ್ಧಿ ಕಲಿಸಲು ನಮ್ಮ ಅದ್ಭುತ ಆರಕ್ಷಕರಿದ್ದಾರೆ!ಅಣ್ಣನಾಗಿ ಗರುಡಗಂಭದಂತೆ ನಾನಿರುವೆ..ಇಂಥ ರೌಡಿಯಿಸಂ ಮಟ್ಟ ಹಾಕುವ!ಕ್ಷೇಮವಾಗಿದ್ದಾನೆ ತಮ್ಮ.ಧನ್ಯವಾದಗಳು ಎಂದಿದ್ದಾರೆ.
ಇನ್ನು ಮಾಧ್ಯಮದ ಜತೆ ಮಾತನಾಡಿರುವ ಅವರು, ಅವನು ಪಾಪದವನು, ಯಾರು ಈ ಹಲ್ಲೆ ನಡೆಸಿದ್ದಾರೆ ಎಂದು ಗೊತ್ತಿಲ್ಲ. ಆದರೆ ಈ ರೀತಿ ದಾದಾಗಿರಿ ಮಾಡಿದವರನ್ನು ಖಂಡಿತಾ ಸುಮ್ಮನೆ ಬಿಡಲ್ಲ ಎಂದು ಕಿಡಿಕಾರಿದ್ದಾರೆ.ಮಗಳನ್ನು ಟ್ಯೂಷನ್‍ಗೆ ಬಿಡಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಕೋಮಲ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.