ಬಾಲಿವುಡ್ ನಟ ಅಕ್ಷಯ್ ಕುಮಾರ್, ಸಾರಾ ಅಲಿಖಾನ್ ಮತ್ತು ಧನುಶ್ ನಟನೆಯ ‘ಅತ್ರಂಗಿ ರೇ’ ಹಿಂದಿ ಸಿನಿಮಾದ ಫಸ್ಟ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಾರಾ ಅಲಿಖಾನ್ ಅವರು ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಮೊದಲು ಧನುಷ್ ಪಾತ್ರದ ಕುರಿತಾದ ಫಸ್ಟ್ ಮೋಷನ್ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ. ಆನಂತರ ಅಕ್ಷಯ್ ಕುಮಾರ್ ಅವರ ಪೋಸ್ಟರ್ ಹಾಗೂ ಕೊನೆಗೆ ತಮ್ಮ ಪಾತ್ರದ ಕುರಿತಾದ ಫಸ್ಟ್ ಮೋಷನ್ ಪೋಸ್ಟರ್ ಶೇರ್ ಮಾಡಿದ್ದಾರೆ. ಇನ್ನು ಚಿತ್ರದ ಟ್ರೇಲರ್ ಮಂಗಳವಾರ ಬಿಡುಗಡೆಯಾಗಲಿದೆ.
'ಅತ್ರಂಗಿ ರೇ' ಫಸ್ಟ್ ಮೋಷನ್ ಪೋಸ್ಟರ್ ರಿಲೀಸ್ - ಅಟ್ರಂಗಿ ರೆ ಚಿತ್ರದ ಟ್ರೇಲರ್
ಅಕ್ಷಯ್ ಕುಮಾರ್, ಸಾರಾ ಅಲಿಖಾನ್, ಧನುಷ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಅತ್ರಂಗಿ ರೇ" (Atrangi re) ಫಸ್ಟ್ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.
'ಅಟ್ರಂಗಿ ರೆ ಫಸ್ಟ್ ಮೋಷನ್ ಪೋಸ್ಟರ್ ಬಿಡುಗಡೆ
ವಿಭಿನ್ನ ನೆಲೆಗಟ್ಟಿನ ಸಾಂಸ್ಕೃತಿಕ ಪ್ರೇಮ ಕಥನವನ್ನು ಈ ಸಿನಿಮಾ ಒಳಗೊಂಡಿದೆ. 2018ರಲ್ಲಿ ತೆರೆಕಂಡ ‘ಜೀರೊ’ ಚಿತ್ರದ ಬಳಿಕ ಆನಂದ್ ರೈ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಇದಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.
Last Updated : Nov 24, 2021, 11:08 AM IST