ಕರ್ನಾಟಕ

karnataka

ETV Bharat / sitara

ಸಿಲಿಕಾನ್​ ಸಿಟಿಯ ಏಷ್ಯಾ ವೆಡ್ಡಿಂಗ್ ಫೇರ್​ಗೆ ನಟಿ ರಾಗಿಣಿ ಚಾಲನೆ - ಸ್ಯಾಂಡಲ್​ವುಡ್​​ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ

ಸಿಲಿಕಾನ್​ ಸಿಟಿಯ ಏಷ್ಯಾ ವೆಡ್ಡಿಂಗ್ ಫೇರ್​ಗೆ ಸ್ಯಾಂಡಲ್​ವುಡ್​​ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಚಾಲನೆ ನೀಡಿದ್ರು.

ಏಷ್ಯಾ ವೆಡ್ಡಿಂಗ್ ಫೇರ್​

By

Published : Oct 11, 2019, 9:06 PM IST

ಬೆಂಗಳೂರು: ಸಿಲಿಕಾನ್​ ಸಿಟಿಯ ಏಷ್ಯಾ ವೆಡ್ಡಿಂಗ್ ಫೇರ್​ಗೆ ಸ್ಯಾಂಡಲ್​ವುಡ್​​ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಚಾಲನೆ ನೀಡಿದ್ರು.

ಏಷ್ಯಾ ವೆಡ್ಡಿಂಗ್ ಫೇರ್

ಕಣ್ಣು ಕುಕ್ಕುವ ಆಭರಣಗಳು ಮಿರಮಿರ ಮಿಂಚುವ ಗೌನ್‌ಗಳು, ಅಟ್ರಾಕ್ಟ್ ಮಾಡುವ ಮೇಕಪ್​ಗಳು ಅಬ್ಬಾ! ಅನ್ನಿಸುವ ಫ್ಲವರ್ ಡೆಕೋರೇಷನ್, ಮದುವೆಯ ವಿಡಿಯೋವನ್ನು ತ್ರೀಡಿ ಮೂಲಕ ನೋಡುವುದು...ಇವೆಲ್ಲ ಒಂದೇ ಸೂರಿನಡಿ ಇದೀಗ ಪ್ರದರ್ಶನಗೊಂಡಿವೆ. ಅದು ಬೆಂಗಳೂರಿನ ಜೆಡಬ್ಲ್ಯು ಮ್ಯಾರಿಯಟ್ ಹೋಟೆಲ್​ನಲ್ಲಿ.

ಏಷ್ಯಾ ವೆಡ್ಡಿಂಗ್ ಫೇರ್

ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಏಷ್ಯಾ ವೆಡ್ಡಿಂಗ್ ಫೇರ್ ಇದಾಗಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

25ಕ್ಕೂ ಹೆಚ್ಚು ಜ್ಯುವೆಲ್ಸ್ ಬ್ರಾಂಡ್, ವೆಡ್ಡಿಂಗ್ ವೇರ್, ಪಾರ್ಟಿವೇರ್ ಅದಕ್ಕೆ ಹೊಂದುವ ಮೇಕಪ್, ಫೋಟೋಶೂಟ್ ಎಲ್ಲವೂ ಇಲ್ಲಿವೆ. ಬ್ರೈಡಲ್ ಮೇಕಪ್ ಬ್ರೈಡಲ್ ಆಭರಣ, ಎಥ್ನಿಕ್ ಉಡುಪುಗಳು, ವಿವಾಹ ಸಂದರ್ಭದಲ್ಲಿ ನೀಡುವ ಉಡುಗೊರೆಗಳು ಪ್ರಮುಖವಾಗಿವೆ.

ಏಷ್ಯಾ ವೆಡ್ಡಿಂಗ್ ಫೇರ್


ಅಕ್ಟೋಬರ್ 11ರಿಂದ 13ರವರೆಗೆ ಬೆಳಗ್ಗೆ 10.30 ರಿಂದ ರಾತ್ರಿ 8ರವರೆಗೆ ಈ ಪ್ರದರ್ಶನ ನಡೆಯಲಿದೆ.

ಏಷ್ಯಾ ವೆಡ್ಡಿಂಗ್ ಫೇರ್​

ABOUT THE AUTHOR

...view details