ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಬದುಕಿದಾಗ ತಮ್ಮ ಪಿಆರ್‌ಕೆ ಬ್ಯಾನರ್ ಅಡಿ ಮೂರು ಸಿನಿಮಾಗಳ ನಿರ್ಮಾಣದ ಕನಸು ಕಂಡಿದ್ದರು. ಆದರೆ ಆ ಸಿನಿಮಾಗಳ ಪೈಕಿ 'ಒನ್ ಕಟ್ ಟು ಕಟ್' ಎಂಬ ವಿಶೇಷ ಟೈಟಲ್ ಹೊಂದಿರುವ ಚಿತ್ರವನ್ನ ಪ್ರತಿಷ್ಠಿತ ಒಟಿಟಿಯಾದ 'ಅಮೆಜಾನ್ ಪ್ರೈಮ್ ವಿಡಿಯೋ'ದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಆದರೆ ದೊಡ್ಮನೆ ರಾಜಕುಮಾರ ಇಂದು ನಮ್ಮೊಂದಿಗೆ ಇಲ್ಲ. ಅಪ್ಪು ಕಂಡಿದ್ದ ಕನಸುಗಳ ಸಿನಿಮಾವನ್ನ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ನನಸು ಮಾಡುವ ಹೊಣೆ ಹೊತ್ತಿದ್ದಾರೆ. ಹೀಗಾಗಿ ಸದ್ಯ ದ್ಯಾನಿಶ್ ಸೇಠ್ ಮುಖ್ಯ ಭೂಮಿಯಲ್ಲಿರೋ 'ಒನ್ ಕಟ್ ಟು ಕಟ್' ಸಿನಿಮಾದ ಬಿಡುಗಡೆ ದಿನಾಂಕವನ್ನ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.
ಕನ್ನಡ ಕಾಮಿಡಿ ಡ್ರಾಮಾ ಆಗಿರುವ 'ಒನ್ ಕಟ್ ಟು ಕಟ್' ಚಿತ್ರದಲ್ಲಿ, ಕಾಮಿಡಿ ಪಾತ್ರದಾರಿ, ಕಲಾ ಶಿಕ್ಷಕ ಗೋಪಿಯಾಗಿ ದ್ಯಾನಿಶ್ ಸೇಠ್ ಕಾಣಿಸಿಕೊಂಡಿದ್ದಾರೆ. ವಿಡಂಬನೆಯ ಜೊತೆಗೆ ಕಾಮಿಡಿ ಮಾತಿನ ಮೂಲಕ ಅವರು ಮನಸೆಳೆಯಲಿದ್ದು, ಇದು 2022ರ ಫೆಬ್ರವರಿ 3 ರಿಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ:ಯಶ್, ಅಲ್ಲು ಅರ್ಜುನ್ ಫೋಟೋ ಶೇರ್ ಮಾಡಿ ಅಚ್ಚರಿ ಹೇಳಿಕೆ ನೀಡಿದ ಬಾಲಿವುಡ್ ನಟಿ ಕಂಗನಾ
ವಂಶಿಧರ ಭೋಗರಾಜು ನಿರ್ದೇಶಿಸಿದ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ತ ತಲ್ವಾರ್ ನಿರ್ಮಾಣದ ಈ ಸಿನಿಮಾ ಪಿಆರ್‌ಕೆ ಬ್ಯಾನರ್‌ನಲ್ಲಿದ್ದು, ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಸಂಯುಕ್ತ ಹೊರನಾಡ್, ವಿನೀತ್ ಬೀಪ್ ಕುಮಾರ್ ಮತ್ತು ಸಂಪತ್ ಮೈತ್ರೇಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಪರಂಪರೆಯನ್ನು ಗೌರವಿಸುತ್ತಾ, 240 ದೇಶಗಳು ಮತ್ತು ಪ್ರದೇಶಗಳಾದ್ಯಂತ ಪ್ರಸಾರವಾಗಲಿರುವ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಮೂರು ಸಿನಿಮಾಗಳ ಪೈಕಿ 'ಒನ್ ಕಟ್ ಟು ಕಟ್' ಒಂದಾಗಿದೆ. ಸಾಮಾಜಿಕ ಮಾಧ್ಯಮದ ಹೋರಾಟಗಾರರು ಒತ್ತಾಯಾಳಾಗಿರಿಸಿಕೊಂಡ ಶಾಲೆಯನ್ನು ಉಳಿಸುವುದೇ ಚಿತ್ರದಲ್ಲಿ ದ್ಯಾನಿಶ್ ಸೇಠ್ ಕೆಲಸಕ್ಕೆ ಸೇರಿದ ಮೊದಲ ದಿನದ ಕೆಲಸವಾಗಿರುತ್ತದೆ. ಮನರಂಜನೆ ಜೊತೆಗೆ ಉತ್ತಮ ಸಂದೇಶ ಹೊಂದಿರುವ ಈ ಚಿತ್ರವನ್ನ ಅಪ್ಪು ತುಂಬಾ ಇಷ್ಟ ಪಟ್ಟಿದ್ದರಂತೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ