ಕರ್ನಾಟಕ

karnataka

ETV Bharat / sitara

ದೇವಸ್ಥಾನದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಯೂರಿ ಕ್ಯಾತರಿ - Mayuri Kyatari Marriage

ಸ್ಯಾಂಡಲ್​ವುಡ್ ನಟಿ ಮಯೂರಿ ಕ್ಯಾತರಿ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. 10 ವರ್ಷಗಳಿಂದ ತಾವು ಪ್ರೀತಿಸುತ್ತಿದ್ದ ಅರುಣ್ ಎಂಬುವವರೊಂದಿಗೆ ಮಯೂರಿ ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

Ashwini Nakshatra
ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಯೂರಿ ಕ್ಯಾತರಿ

By

Published : Jun 12, 2020, 9:33 AM IST

Updated : Jun 12, 2020, 9:44 AM IST

'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಬಣ್ಣದ ಪಯಣ ಆರಂಭಿಸಿದ ಮಯೂರಿ ಕ್ಯಾತರಿ ಸದ್ದಿಲ್ಲದೆ ಸಪ್ತಪದಿ ತುಳಿದಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರು ದೇವಸ್ಥಾನವೊಂದರಲ್ಲಿ ಮಯೂರಿ ಸರಳವಾಗಿ ಮದುವೆಯಾಗಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಯೂರಿ ಕ್ಯಾತರಿ
ಸರಳವಾಗಿ ಮದುವೆಯಾದ ಮಯೂರಿ

ಕೊರೊನಾ ಭೀತಿ ಇರುವ ಕಾರಣ ಕುಟುಂಬ ಹಾಗೂ ಕೆಲವೇ ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಜೆ.ಪಿ. ನಗರದ ತಿರುಮಲಗಿರಿ ವೆಂಕಟೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ 2.30 ರಿಂದ 3 ಗಂಟೆಯ ಬ್ರಾಹ್ಮಿ ಮಹೂರ್ತದಲ್ಲಿ ಮಯೂರಿ, ಅರುಣ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇದು ಲವ್ ಕಂ ಅರೇಂಜ್ ಮ್ಯಾರೇಜ್ ಎನ್ನಲಾಗಿದೆ.

'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಬಣ್ಣದ ಯಾನ ಆರಂಭಿಸಿದ ಚೆಲುವೆ
ಹಿರಿಯರ ಒಪ್ಪಿಗೆ ಪಡೆದು ಗೆಳೆಯನನ್ನು ವರಿಸಿದ ಮಯೂರಿ ಕ್ಯಾತರಿ

ಈ ಮುನ್ನ ಅಮೆರಿಕದಲ್ಲಿ ಸೆಟಲ್ ಆಗಿದ್ದ ಅರುಣ್, ಈಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅರುಣ್ ಹಾಗೂ ಮಯೂರಿ ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದು ಈಗ ಹಿರಿಯರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಇಂದು 11.30 ಕ್ಕೆ ಬೆಂಗಳೂರಿನಲ್ಲೇ ಸರಳವಾಗಿ ಆರತಕ್ಷತೆ ಕೂಡಾ ಇದ್ದು ಕುಟುಂಬದವರು ಹಾಗೂ ಆಪ್ತರಿಗಷ್ಟೇ ಆಮಂತ್ರಣ ನೀಡಿದ್ದಾರೆ ಎನ್ನಲಾಗಿದೆ.

ಅರುಣ್, ಮಯೂರಿ ಕ್ಯಾತರಿ
ಅರುಣ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ

ಮಯೂರಿ ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇರಿಸಿರುವುದು ಅಭಿಮಾನಿಗಳಿಗೆ ನಿರಾಶೆಯುಂಟಾಗಿದೆ ಎನ್ನಲಾಗಿದೆ.

Last Updated : Jun 12, 2020, 9:44 AM IST

ABOUT THE AUTHOR

...view details