ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಕನ್ನಡ ನಟಿಯರ ಪೈಕಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕೂಡ ಒಬ್ರು. ತಮ್ಮ ನಿತ್ಯ ಜೀವನದ ದಿನಚರಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಲ್ಲಿ ಶೇರ್ ಮಾಡುತ್ತಿದ್ದು, ಫ್ಯಾನ್ಸ್ಗೆ ಖುಷಿ ನೀಡುತ್ತಿದ್ದಾರೆ. ಇದೀಗ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿ ಸುದ್ದಿಯಾಗುತ್ತಿದ್ದಾರೆ.
ಇದನ್ನು ಓದಿ : ಡ್ರಗ್ಸ್ ಜಾಲ: ನಟಿಮಣಿಯರ ಕೂದಲು ಸ್ಯಾಂಪಲ್ ಸಂಗ್ರಹಕ್ಕೆ ಅನುಮತಿ ನೀಡಿದ ಕೋರ್ಟ್
ಇತ್ತೀಚೆಗೆ ಕೋಟಿಗೊಬ್ಬ-3 ಚಿತ್ರದ ಪಟಾಕಿ ಪೋರಿಯೋ ಹಾಡಿನಲ್ಲಿ ಸುದೀಪ್ ಜೊತೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದ ಆಶಿಕಾ ರಂಗನಾಥ್ ಇದೀಗ ಫಿಟ್ನೆಸ್ ಮಾಡುತ್ತ ಗಮನ ಸೆಳೆಯುತ್ತಿದ್ದಾರೆ. ಜಿಮ್ನಲ್ಲಿ 12 ಬಾಕ್ಸ್ ಜಂಪ್, 9 ಪುಶಪ್ಸ್ ಮತ್ತು 15 ಕ್ಯಾಲೊರಿಸ್ ರಾ ಮಾಡಿರುವುದಾಗಿ ಈ ದಿನ ವರ್ಕೌಟ್ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಆಶಿಕಾರ ಜಿಮ್ ವರ್ಕೌಟ್ ಬಗ್ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಉತ್ತಮವಾಗಿ ಜಿಮ್ ಮಾಡುತ್ತಿದ್ದೀರಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಆಶಿಕಾ ನಟನೆಯ ಗರುಡ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ. ಅಲ್ಲದೆ ಶರಣ್ ಜೊತೆ ಅವತಾರ ಪುರುಷ ಸಿನಿಮಾದಲ್ಲೂ ಆಶಿಕಾ ಬಣ್ಣ ಹಚ್ಚಿದ್ದಾರೆ.