'ಕರ್ನಾಟಕ ಕ್ರಶ್' ಎಂದೇ ಹೆಸರಾದ ಆಶಿಕಾ ರಂಗನಾಥ್ ಮೂಲತ: ತುಮಕೂರು ಹುಡುಗಿ. 2016 ರಲ್ಲಿ 'ಕ್ರೇಜಿ ಬಾಯ್' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಬಂದ ಈ ಚುಟು ಚುಟು ಹುಡುಗಿ ಇದುವರೆಗೂ ಸುಮಾರು 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಆಶಿಕಾ 'ರೇಮೊ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ತನ್ನೂರಿನ ಪ್ರಕೃತಿ ಸೌಂದರ್ಯದ ಸವಿ ಹಂಚಿಕೊಂಡ ಚುಟು ಚುಟು ಹುಡುಗಿ - ತುಮಕೂರಿನಲ್ಲಿ ಸೂರ್ಯಾಸ್ತ ಎಂಜಾಯ್ ಮಾಡಿದ ಆಶಿಕಾ
ತುಮಕೂರಿನ ದೇವರಾಯನ ದುರ್ಗಕ್ಕೆ ಭೇಟಿ ನೀಡಿದ ಆಶಿಕಾ ರಂಗನಾಥ್, ಸೂರ್ಯಾಸ್ತದ ಸುಂದರ ಪೋಟೋಗಳನ್ನು ಕ್ಲಿಕ್ ಮಾಡಿ ತಮ್ಮಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. 'ನಮ್ಮ ತುಮಕೂರಿನಲ್ಲಿ ಸೂರ್ಯಾಸ್ತವನ್ನು ನೋಡುತ್ತಿದ್ದೇನೆ' ಎಂದು ಕ್ಯಾಪ್ಷನ್ ಕೂಡಾ ಹಾಕಿದ್ದಾರೆ.
'ರೇಮೊ' ಸಿನಿಮಾ ಶೂಟಿಂಗ್ ನಡುವೆ ಬಿಡುಗಡೆ ಮಾಡಿಕೊಂಡು ಆಶಿಕಾ ತನ್ನ ಸ್ವಂತ ಊರು ತುಮಕೂರಿಗೆ ತೆರಳಿದ್ದಾರೆ. ನಿನ್ನೆ ಸಂಜೆ ವೇಳೆ ದೇವರಾಯನ ದುರ್ಗಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿದ ಆಶಿಕಾ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಸೂರ್ಯಾಸ್ತದ ಸುಂದರ ಪೋಟೋಗಳನ್ನು ಕ್ಲಿಕ್ ಮಾಡಿ ತಮ್ಮಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. 'ನಮ್ಮ ತುಮಕೂರಿನಲ್ಲಿ ಸೂರ್ಯಾಸ್ತವನ್ನು ನೋಡುತ್ತಿದ್ದೇನೆ' ಎಂದು ಕ್ಯಾಪ್ಷನ್ ಕೂಡಾ ಹಾಕಿದ್ದಾರೆ. ಆಶಿಕಾ ಅಭಿಮಾನಿಗಳು ಈ ಫೋಟೋವನ್ನು ಮೆಚ್ಚಿ ಕಮೆಂಟ್ ಮಾಡಿದ್ದಾರೆ.
ಆಶಿಕಾ ಸದ್ಯಕ್ಕೆ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗರುಡ, ರಂಗಮಂದಿರ, ಅವತಾರ ಪುರುಷ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ರೇಮೊ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಪವನ್ ಒಡೆಯರ್ 'ರೇಮೊ' ಸಿನಿಮಾವನ್ನು ನಿರ್ದೇಶಿಸುತ್ತಿದ್ದು ವಿಲನ್ ಸಿನಿಮಾ ನಿರ್ಮಾಪಕ ಸಿ.ಆರ್. ಮನೋಹರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಆಶಿಕಾಗೆ ಇಶಾನ್ ಜೊತೆಯಾಗಿದ್ದಾರೆ.