ಮುಂಬೈ: ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರ ಎರಡನೇ ಮಗ ಜೆಹ್ ಅಲಿ ಖಾನ್ಗೆ ಇಂದು ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ. ನಟಿ ಮಗ ಜೆಹ್ನ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ಜೆಹ್ ಹಿರಿಯ ಸಹೋದರ ತೈಮೂರ್ ಹಿಂದೆ ಅಂಬೆಗಾಲಿನಲ್ಲಿ ಹೋಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇಬ್ಬರೂ ಸಹೋದರರ ಹಿಂದಿನಿಂದ ಫೋಟೋ ಕ್ಲಿಕ್ ಮಾಡಲಾಗಿದೆ.
ಭಾಯೀ, ನನಗಾಗಿ ಕಾಯುತ್ತಿರು, ನನಗೆ ಇಂದು ಒಂದು ವರ್ಷ. ನಾವು ಒಟ್ಟಿಗೆ ಜಗತ್ತನ್ನು ಸುತ್ತೋಣ. ಖಂಡಿತವಾಗಿ ಅಮ್ಮ ಎಲ್ಲೆಡೆ ನಮ್ಮ ಜೊತೆ ಇರುತ್ತಾರೆ. ಜನ್ಮದಿನದ ಶುಭಾಶಯಗಳು ನನ್ನ ಜೆಹ್ ಬಾಬಾ.. ನನ್ನ ಜೀವ #ಮೇರಾ ಬೇಟಾ ಎಂದು ಕರೀನಾ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ:ಚೋಟುದ್ದ ಬಟ್ಟೆಯಲ್ಲಿ ಚೂಟಿಯಂಂತೆ ಕಾಣುತ್ತಿರುವ ಜಾಕ್ಪಾಟ್ ಸುಂದರಿ
ಕರೀನಾ ಅವರ ಅತ್ತಿಗೆ ಸಬಾ ಅಲಿ ಖಾನ್ ಅವರು ಕಾಮೆಂಟ್ನಲ್ಲಿ "ಜನ್ಮದಿನದ ಶುಭಾಶಯಗಳು ಜೆ ಜಾನ್! ಲವ್ ಯೂ ಎಂದು ಬರೆದಿದ್ದಾರೆ. "ಜನ್ಮದಿನದ ಶುಭಾಶಯಗಳು ಜೆಹ್" ಎಂದು ದಿಯಾ ಮಿರ್ಜಾ ಕಾಮೆಂಟ್ ಮಾಡಿದ್ದಾರೆ. ಕರೀನಾ ಕಪೂರ್ ಅವರ ಆತ್ಮೀಯ ಸ್ನೇಹಿತೆ ಅಮೃತಾ ಅರೋರಾ ಅವರು, "ಜೆಹ್ ಬಾಬಾ" ಎಂಬು ಬರೆದು ಹೃದಯದ ಎಮೋಜಿಗಳನ್ನು ಹಾಕಿದ್ದಾರೆ.