ಮುಂಬೈ: ಬಾಲಿವುಡ್ ಚಿತ್ರರಂಗದ ಪ್ರತಿಭಾವಂತ ಗಾಯಕ ಅರ್ಮಾನ್ ಮಲಿಕ್ ಅವರು 2022 ಅನ್ನು 'ಯು' ಎಂಬ ಶೀರ್ಷಿಕೆಯೊಂದಿಗೆ ಪ್ರಾರಂಭಿಸಿದ್ದಾರೆ.
ಅರ್ಮಾನ್ ಮಲಿಕ್ ಅವರು ಇಂಗ್ಲಿಷ್ನ 'ಯು' ಎಂಬ ಶೀರ್ಷಿಕೆಯ ಆಲ್ಬಂ ಸಾಂಗ್ನೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಹಾಡಿನ ಕುರಿತು ಮಾಹಿತಿ ಹಂಚಿಕೊಂಡಿರುವ ಅರ್ಮಾನ್, 'ಯು' ವಿಶೇಷ ವ್ಯಕ್ತಿಯನ್ನು ಹುಡುಕುವ ಮತ್ತು ಅವರ ಆಲೋಚನೆಗಳಲ್ಲಿ ಮುಳುಗುವ ಭಾವನೆಯನ್ನು ಒಳಗೊಂಡಿದೆ.