ಕರ್ನಾಟಕ

karnataka

ETV Bharat / sitara

'ಕಿಲಾಡಿ'ಗೆ ವಿಲನ್​​​ ಆಗ್ತಾರಾ ಅರ್ಜುನ್​ ಸರ್ಜಾ? - ಮಾಸ್​​ ಮಹಾರಾಜ್​​ ರವಿತೇಜ ನಟನೆಯ ಕಿಲಾಡಿ

ಮಾಸ್​​ ಮಹಾರಾಜ್​​ ರವಿತೇಜ ನಟನೆಯ ಕಿಲಾಡಿ ಸಿನಿಮಾದಲ್ಲಿ ನಟಿಸುವುದಾಗಿ ಸ್ವತ: ಅರ್ಜುನ್​​ ಸರ್ಜಾ ಸೋಷಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​​​ನಲ್ಲಿ ಸ್ಟೈಲ್​ ಲುಕ್​​ನಲ್ಲಿ ನಿಂತಿರುವ ಫೋಟೋ ಒಂದನ್ನು ಶೇರ್​​ ಮಾಡಿರುವ ನಟ, 2021ರಲ್ಲಿ ನನ್ನ ಹೊಸ ಪಯಣ ಕಿಲಾಡಿ ಸೆಟ್​​ನಲ್ಲಿ ಎಂದು ಬರೆದಿದ್ದಾರೆ.

'ಕಿಲಾಡಿ'ಗೆ ವಿಲಾನ್​​​ ಆಗ್ತಾರಾ ಅರ್ಜುನ್​ ಸರ್ಜಾ?
'ಕಿಲಾಡಿ'ಗೆ ವಿಲಾನ್​​​ ಆಗ್ತಾರಾ ಅರ್ಜುನ್​ ಸರ್ಜಾ?

By

Published : Jan 28, 2021, 4:26 PM IST

ಬಹುಭಾಷೆ ನಟ, ಕನ್ನಡಿಗ ಅರ್ಜುನ್​ ಸರ್ಜಾ ಇತ್ತೀಚೆಗೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಫೋಟೋ ಮತ್ತು ವಿಡಿಯೋಗಳನ್ನು ಹಾಕುತ್ತ ಅಭಿಮಾನಿಗಳನ್ನು ರಂಜಿಸುತ್ತಾರೆ. ಆದ್ರೀಗ ತೆಲುಗಿನ ಕಿಲಾಡಿ ಸಿನಿಮಾದಲ್ಲಿ ನಟಿಸುವುದಾಗಿ ಅರ್ಜುನ್​ ಸರ್ಜಾ ಹೇಳಿಕೊಂಡಿದ್ದಾರೆ.

ಹೌದು, ಮಾಸ್​​ ಮಹಾರಾಜ್​​ ರವಿತೇಜ ನಟನೆಯ ಕಿಲಾಡಿ ಸಿನಿಮಾದಲ್ಲಿ ನಟಿಸುವುದಾಗಿ ಸ್ವತ: ಅರ್ಜುನ್​​ ಸರ್ಜಾ ಸೋಷಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​​​ನಲ್ಲಿ ಸ್ಟೈಲ್​ ಲುಕ್​​ನಲ್ಲಿ ನಿಂತಿರುವ ಫೋಟೋ ಒಂದನ್ನು ಶೇರ್​​ ಮಾಡಿರುವ ನಟ, 2021ರಲ್ಲಿ ನನ್ನ ಹೊಸ ಪಯಣ ಕಿಲಾಡಿ ಸೆಟ್​​ನಲ್ಲಿ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ರವಿತೇಜ ಬರ್ತಡೇ ಇದ್ದು ಅಂದು ಕಿಲಾಡಿ ಸಿನಿಮಾದ ಟೀಸರ್​​ ರಿಲೀಸ್​​ ಮಾಡಲಾಗಿದೆ. ಮತ್ತೊಂದು ಮಾಹಿತಿ ಪ್ರಕಾರ ಅರ್ಜುನ್​ ಸರ್ಜಾ ಕಿಲಾಡಿ ಸಿನಿಮಾದಲ್ಲಿ ವಿಲನ್​ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ.

ABOUT THE AUTHOR

...view details