ಕರ್ನಾಟಕ

karnataka

ETV Bharat / sitara

'ಆದಿತ್ಯ ವರ್ಮಾ' ಟ್ರೇಲರ್ ಬಿಡುಗಡೆ...ತಮಿಳಿನಲ್ಲಿ ಮಿಂಚುತ್ತಿರುವ ಕನ್ನಡಿಗ ಅಚ್ಯುತ್ ಕುಮಾರ್ - ಆದಿತ್ಯ ವರ್ಮಾ ಟ್ರೇಲರ್ ಬಿಡುಗಡೆ

'ಅರ್ಜುನ್ ರೆಡ್ಡಿ' ಚಿತ್ರದ ಲಿಪ್​ಲಾಕ್ ಸೀನ್​​​​​​​ಗಳು ತಮಿಳು ರೀಮೇಕ್ 'ಆದಿತ್ಯ ವರ್ಮಾ' ದಲ್ಲಿ ಕೂಡಾ ಮುಂದುವರೆದಿದೆ. ತಮಿಳು ನಟ ವಿಕ್ರಮ್ ಪುತ್ರ ಧ್ರುವ್​​​​ ಈ ಚಿತ್ರದ ಮೂಲಕ ಕಾಲಿವುಡ್​​​ಗೆ ಕಾಲಿಟ್ಟಿದ್ದಾರೆ.

'ಆದಿತ್ಯ ವರ್ಮಾ' ಟ್ರೇಲರ್

By

Published : Oct 22, 2019, 4:52 PM IST

ವಿಜಯ್ ದೇವರಕೊಂಡ ನಟನೆಯ 'ಅರ್ಜುನ್ ರೆಡ್ಡಿ' ಸಿನಿಮಾ ಈಗಾಗಲೇ ಹಿಂದಿಗೆ 'ಕಬೀರ್ ಸಿಂಗ್' ಹೆಸರಿನಲ್ಲಿ ತಯಾರಾಗಿ, ಬಿಡುಗಡೆಯಾಗಿ ಪ್ರಶಂಸೆಗೂ ಪಾತ್ರವಾಗಿತ್ತು. ಹಿಂದಿಯಲ್ಲಿ ಶಾಹಿದ್ ಕಪೂರ್ ಹಾಗೂ ಕೈರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಇನ್ನು 'ಕಬೀರ್ ಸಿಂಗ್​' ಗೆ ಮೊದಲೇ ತಮಿಳು ರೀಮೇಕ್ ಆರಂಭವಾಗಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ. ಈ ಮೊದಲು ಸಿನಿಮಾವನ್ನು ಅರ್ಧ ಶೂಟಿಂಗ್ ಮುಗಿಸಿದ ನಂತರ ಚಿತ್ರದ ಔಟ್​​ಪುಟ್​​​ಗೆ ಸಮಾಧಾನಗೊಳ್ಳದ ಚಿತ್ರದ ನಿರ್ಮಾಪಕರು ನಾಯಕ ಧ್ರುವ್​ ಒಬ್ಬರನ್ನು ಹೊರತುಪಡಿಸಿ ಇಡೀ ಚಿತ್ರತಂಡವನ್ನು ಬದಲಿಸಿ ಮೊದಲಿನಿಂದ ಶೂಟಿಂಗ್ ಆರಂಭಿಸಲು ಸೂಚಿಸಿದ್ದರು. ನಿರ್ದೇಶಕ ಬಾಲಾ ಸ್ಥಾನಕ್ಕೆ ಗಿರೀಶಯ್ಯ ಕೂಡಾ ಬಂದರು. ಈ ಮುನ್ನ ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಟ್ರೇಲರನ್ನು ಹೊರತಂದಿದೆ. 'ಅರ್ಜುನ್ ರೆಡ್ಡಿ' ಚಿತ್ರದ ಲಿಪ್​ಲಾಕ್ ಸೀನ್​​​​ಗಳು ತಮಿಳು ರೀಮೇಕ್​​​​​​​​​ನಲ್ಲಿ ಕೂಡಾ ಮುಂದುವರೆದಿದೆ. ತಮಿಳು ನಟ ವಿಕ್ರಮ್ ಪುತ್ರ ಧ್ರುವ್​​​​ ಈ 'ಆದಿತ್ಯ ವರ್ಮಾ' ಚಿತ್ರದ ಮೂಲಕ ಕಾಲಿವುಡ್​​​ಗೆ ಕಾಲಿಟ್ಟಿದ್ದಾರೆ.

'ಆದಿತ್ಯ ವರ್ಮಾ'

ಪಾತ್ರಕ್ಕಾಗಿ ಧ್ರುವ್ ಭಾರೀ ವರ್ಕೌಟ್ ಮಾಡಿ ತಯಾರಾಗಿದ್ದಾರೆ. ಧ್ರುವ್​​ಗೆ ನಾಯಕಿಯಾಗಿ ಬನಿತಾ ಸಂಧು ನಟಿಸಿದ್ದಾರೆ. ಕನ್ನಡಿಗ ಅಚ್ಯುತ್ ಕುಮಾರ್ ನಾಯಕಿ ತಂದೆಯಾಗಿ ನಟಿಸಿದ್ದಾರೆ. E4 ಎಂಟರ್​​​ಟೈನ್ಮೆಂಟ್ ಬ್ಯಾನರ್ ಅಡಿ ಸಿನಿಮಾ ತಯಾರಾಗಿದೆ. ಸದ್ಯಕ್ಕೆ ಪೋಸ್ಟ್​ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಶೀಘ್ರವೇ ಸಿನಿಮಾ ತೆರೆಗೆ ಬರಲಿದೆ.

ABOUT THE AUTHOR

...view details