ತೆಲುಗು ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 'ಅರ್ಜುನ್ ರೆಡ್ಡಿ' ಇದೀಗ ತಮಿಳಿನಲ್ಲಿ ತನ್ನ ಆರ್ಭಟ ಶುರು ಮಾಡಲು ನಿಂತಿದ್ದಾನೆ.
ತಮಿಳಿನಲ್ಲಿ ಅರ್ಜುನ್ ರೆಡ್ಡಿ ರಿಮೇಕ್ ಮೂವಿ ಬರುತ್ತಿದ್ದು, ಇದರ ಹೆಸರು ಆದಿತ್ಯ ವರ್ಮ. ಈ ಸಿನಿಮಾದ ಅಧಿಕೃತ ಟ್ರೇಲರ್ ರಿಲೀಸ್ ಆಗಿದ್ದು, ಧ್ರುವ ವಿಕ್ರಮ್ ಆದಿತ್ಯ ಪಾತ್ರದಲ್ಲಿ ಮಿಂಚಿದ್ದಾರೆ.
'ಆದಿತ್ಯ ವರ್ಮ'ನಿಗೆ ನಿರ್ದೇಶಕ ಗಿರೀಶಾಯ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಮುಕೇಶ್ ಮೆಹ್ತಾ ಬಂಡವಾಳ ಹೂಡುತ್ತಿದ್ದಾರೆ. ಆದಿತ್ಯ ವರ್ಮಾಗೆ ಜೋಡಿಯಾಗಿ ನಟಿ ಬನಿತಾ ಸಾಧು ಸೇರಿಕೊಂಡಿದ್ದಾರೆ. ಈ ಜೋಡಿ ಈಗಾಗಲೇ ಪ್ರಿಯಾ ಆನಂದ್ ಸಿನಿಮಾದಲ್ಲಿ ನಟಿಸಿತ್ತು.
ಇದೀಗ ಫಿಲಂ ಟ್ರೇಲರ್ ರಿಲೀಸ್ ಆಗಿದ್ದು, ಅತಿ ಶೀಘ್ರದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ ಎಂದು ಚಿತ್ರತಂಡ ತಿಳಿಸಿದೆ.