ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ಗೆ ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಎನ್ಸಿಬಿಯಿಂದ ಸಮನ್ಸ್ ಬಂದಿದ್ದು, ಇದಾದ ನಂತ್ರ ಅವರು ದೇಶ ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ನಟ ರಾಮ್ಪಾಲ್ ಗರಂ ಆಗಿದ್ದಾರೆ.
ಪ್ರಕರಣ ಏನು: ಎನ್ಸಿಬಿಯಿಂದ ಸಮನ್ಸ್ ಬಂದ ಮೇಲೆ ವಿಚಾರಣೆಗೆ ಹಾಜರಾಗಲು ಡಿಸೆಂಬರ್ 21ರವರೆಗೆ ಕಾಲಾವಕಾಶ ಕೊಡಿ ಎಂದು ಅರ್ಜುನ್ ರಾಮ್ಪಾಲ್ ಕೇಳಿಕೊಂಡಿದ್ದರು. ಎನ್ಸಿಬಿ ಅಧಿಕಾರಿಗಳು ಕಳೆದ ನವೆಂಬರ್ 13ರಂದು ನಟ ರಾಮ್ಪಾಲ್ರನ್ನು ವಿಚಾರಣೆಗೆ ಒಳಪಡಿಸಿದ್ದರು. ನಂತ್ರ ಮತ್ತೊಮ್ಮೆ ವಿಚಾರಣೆ ನಡೆಸಲು ಸಮನ್ಸ್ ನೀಡಿದ್ದರು.
ಇದನ್ನೂ ಓದಿ : ಸಿನಿಮಾದಲ್ಲಿ ಅವಕಾಶ ಕೊಡ್ತೇನೆಂದು ಅಶ್ಲೀಲ ಸಂದೇಶ: ನಿರ್ಮಾಪಕನ ಮೇಲೆ FIR
ದೇಶ ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿಗೆ ಗರಂ ಆಗಿರುವ ನಟ, ನಾನು ನನ್ನ ಸಿನಿಮಾ 'ನೈಲ್ ಪಾಲೀಶ್' ಪ್ರಮೋಷನ್ ಮಾಡುತ್ತಿದ್ದೇನೆ. ಆದ್ರೆ ಕಲವು ಸುದ್ದಿ ವಾಹಿನಿಗಳು ಸುಳ್ಳು ಸುದ್ದಿ ಹರಡುತ್ತಿವೆ ಎಂದಿದ್ದಾರೆ. ಮತ್ತೊಂದು ಮಾತನ್ನು ಹೇಳಿರುವ ರಾಮ್ಪಾಲ್, ಕೆಲವು ಸುದ್ದಿ ವಾಹಿನಿಗಳು ಟ್ರಾವೆಲ್ ಏಜೆಂಟ್ ರೀತಿ ಕೆಲಸ ಮಾಡುತ್ತಿವೆ ಎಂದಿದ್ದಾರೆ.
ಈ ಹಿಂದೆ ನವೆಂಬರ್ 9ರಂದು ರಾಮ್ಪಾಲ್ ನಿವಾಸದ ಮೇಲೆ ದಾಳಿ ಮಾಡಿದ್ದ ಎನ್ಸಿಬಿ, ಕೆಲವವೊಂದು ಔಷಧ ಸೇರಿದಂತೆ ಮಾದಕ ವಸ್ತುಗೆ ಸಂಬಂಧಿಸಿದ್ದನ್ನು ಜಪ್ತಿ ಮಾಡಿತ್ತು ಎನ್ನಲಾಗಿದೆ.