ಕರ್ನಾಟಕ

karnataka

ETV Bharat / sitara

ಮಲೈಕಾ ಬರ್ತ್‌ಡೇಗೆ ರೋಮ್ಯಾಂಟಿಕ್​ ಚಿತ್ರ ಶೇರ್​ ಮಾಡಿದ ಅರ್ಜುನ್​​ ಕಪೂರ್​​.. ಕ್ರೆಡಿಟ್​ ಕೇಳಿದ ಕರೀನಾ.. - ಅರ್ಜುನ್​ ಕಪೂರ್​ ಇನ್ಸ್ಟಾಗ್ರಾಮ್​

ಈ ದಿನ ಮತ್ತು ಮುಂದಿನ ಎಲ್ಲಾ ದಿನಗಳು ನನಗೆ ನಿಮ್ಮನ್ನು ನಗಿಸಲು ಬೇಕು. ಈ ವರ್ಷ ನಿನಗೆ ಹೆಚ್ಚಿನ ನಗುತರಲಿ ಎಂದು ಪೋಸ್ಟ್​​ ಮಾಡಿದ್ದಾರೆ. ಅದಕ್ಕೆ ಮಲೈಕಾ ರೀ ಕಮೆಂಟ್ ಮಾಡಿ, 'ನಾನು ಈ ಚಿತ್ರದಲ್ಲಿ ನಿನ್ನನ್ನು ನಗುವಂತೆ ಮಾಡುತ್ತಿದ್ದೇನೆ..

arjun-kapoor-shares-heartfelt-birthday-wish-for-malaika-arora-she-reacts
ಮಲೈಕಾ ಬರ್ತಡೇ

By

Published : Oct 23, 2021, 3:30 PM IST

ಹೈದರಾಬಾದ್ :ಬಾಲಿವುಡ್​​ ನಟಿ ಮಲೈಕಾ ಅರೋರಾ ಹುಟ್ಟು ಹಬ್ಬದ ಹಿನ್ನೆಲೆ ನಟ ಅರ್ಜುನ್​ ಕಪೂರ್​ ರೋಮ್ಯಾಂಟಿಕ್​​ ಫೋಟೋ​​ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋವನ್ನು ಮಲೈಕಾ ಬೆಸ್ಟ್​​ ಫ್ರೆಂಡ್​​ ನಟಿ ಕರೀನಾ ಕಪೂರ್​ ಖಾನ್​ ಕ್ಲಿಕ್​ ಮಾಡಿದ್ದಾರೆ.

ಮಲೈಕಾ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿರುವ ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್ ಮುಖಪುಟದಲ್ಲಿ, 'ಈ ದಿನ ಮತ್ತು ಮುಂದಿನ ಎಲ್ಲಾ ದಿನಗಳು ನನಗೆ ನಿಮ್ಮನ್ನು ನಗಿಸಲು ಬೇಕು. ಈ ವರ್ಷ ನಿನಗೆ ಹೆಚ್ಚಿನ ನಗುತರಲಿ ಎಂದು ಪೋಸ್ಟ್​​ ಮಾಡಿದ್ದಾರೆ. ಅದಕ್ಕೆ ಮಲೈಕಾ ರೀ ಕಮೆಂಟ್ ಮಾಡಿ, 'ನಾನು ಈ ಚಿತ್ರದಲ್ಲಿ ನಿನ್ನನ್ನು ನಗುವಂತೆ ಮಾಡುತ್ತಿದ್ದೇನೆ', ಎಂದು ತಮ್ಮ ಟೈಮ್‌ಲೈನ್‌ನಲ್ಲಿ ಬರೆದುಕೊಂಡಿದ್ದಾರೆ.

ಅರ್ಜುನ್​ ಮಲೈಕಾ ರೋಮ್ಯಾಂಟಿಕ್​ ಚಿತ್ರವನ್ನು ಕರೀನಾ ತಮ್ಮ ಮನೆಯಲ್ಲಿ ತೆಗೆದಿದ್ದಾರೆ. ಸದ್ಯ ಅರ್ಜುನ್​​ ಪೋಸ್ಟ್​​ಗೆ ಟ್ಟೀಟ್​ ಮಾಡಿರುವ ಕರೀನಾ ಫೋಟೋ ಕ್ರೆಡಿಟ್​​ ಕೋಡುವಂತೆ ಕಾಲೆಳೆದಿದ್ದಾರೆ. ಅದಕ್ಕೆ ಅರ್ಜುನ್​ @kareenakapoorkhan ಮುಂದಿನ ಫೋಟೋಶೂಟ್​ ನೀವೇ ಮಾಡ್ಬೇಕು ಅದು ಮೆಹಬೂಬ್‌ ನಲ್ಲಿ ಅಂತಾ ರಿಪ್ಲೈ ಮಾಡಿದ್ದಾರೆ.

ABOUT THE AUTHOR

...view details