ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನ್ಯಾ ಇಂದು ತಮ್ಮ 39 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಸೆಂಚುರಿ ಸಿನಿಮಾಗಳ ಸಂಗೀತ ಮಾಂತ್ರಿಕನಿಗೆ ಹುಟ್ಟುಹಬ್ಬದ ಸಂಭ್ರಮ - undefined
ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪ್ರೇಮ್ ಕೇಕ್ ಕತ್ತರಿಸುವ ಮೂಲಕ ಜನ್ಯಾ ಬರ್ತಡೇಗೆ ಶುಭಾಶಯ ಕೋರಿದ್ದಾರೆ.
2006ರಲ್ಲಿ 'ಆಟೋಗ್ರಾಫ್ ಪ್ಲೀಸ್' ಚಿತ್ರದ 'ನಿನ್ನ ನೋಡಿದ್ರೆ ಭೂಕಂಪ ಕಣೆ' ಎಂಬ ಹಾಡಿಗೆ ಟ್ಯೂನ್ ಹೊಸೆಯಲು ಶುರು ಮಾಡಿದ್ದ ಅರ್ಜುನ್ ಜನ್ಯಾ ಇಂದು ರಾಕ್, ಪಾಪ್, ಹಿಪ್ಹಾಪ್, ಪೆಪ್ಪಿ ನಂಬರ್, ಕ್ಲಾಸಿಕಲ್, ಮೆಲೋಡಿ ಯಾವುದೇ ವೆರೈಟಿ ಕೇಳಿದರೂ ನೀರು ಕುಡಿದಷ್ಟೇ ಸಲೀಸಾಗಿ ಟ್ಯೂನ್ಗಳನ್ನು ಜೋಡಿಸುತ್ತಾರೆ. 'ದಿ ವಿಲನ್' ಸಿನಿಮಾ ಮೂಲಕ ತಮ್ಮ ಸಾಮರ್ಥ್ಯ ಏನೆಂಬುವುದನ್ನು ಜನ್ಯಾ ಮತ್ತೆ ತೋರಿಸಿದ್ದಾರೆ. ಸಂಗೀತ ನಿರ್ದೇಶನಕ್ಕಾಗಿ ಸೈಮಾ, ಫಿಲ್ಮ್ ಫೇರ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅರ್ಜುನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಶಿವರಾಜ್ಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಸ್ಯಾಂಡಲ್ವುಡ್ನ ಬಹುತೇಕ ಸ್ಟಾರ್ಗಳ ಚಿತ್ರಕ್ಕೆ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ತಾನಾಯಿತು, ತನ್ನ ಕೆಲಸವಾಯಿತು ಎಂದು ದಿನಪೂರ್ತಿ ಬ್ಯುಸಿ ಇರುವ ಸಂಗೀತ ನಿರ್ದೇಶಕ ಜನ್ಯಾಗೆ ನಿರ್ದೇಶಕ ಪ್ರೇಮ್ ವಿಶ್ ಮಾಡಿದ್ದಾರೆ. ಕೇಕ್ ತರಿಸಿ ಕಟ್ ಮಾಡಿಸುವ ಮೂಲಕ ಜನ್ಯಾ ಹುಟ್ಟುಹಬ್ಬ ಆಚರಿಸಿದ್ದಾರೆ. ಜನ್ಯಾ ಅಭಿಮಾನಿಗಳು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಬರ್ತಡೇ ಶುಭಾಶಯ ಕೋರಿದ್ದಾರೆ.