ಸರಿಗಮಪ ಸೀಸನ್ 17 ಆರಂಭವಾಗಿದ್ದು ಸಂಗೀತ ಸಂಸ್ಥಾನ ಎಂಬ ಹೊಸ ಪರಿಕಲ್ಪನೆಯೊಂದಿಗೆ ಸಂಗೀತ ಪ್ರಿಯರ ಮನ ಸೆಳೆಯುತ್ತಿದೆ. ಸ್ಪರ್ಧಿಗಳು ಕೂಡಾ ಬಹಳ ಉತ್ಸುಕರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ನಾಳೆ ಈ ಸೀಸನ್ನ ಮಹಾಸಂಚಿಕೆ ಕೂಡಾ ಪ್ರಸಾರವಾಗಲಿದೆ.
ಆಸ್ಪತ್ರೆಯಿಂದ ಅರ್ಜುನ್ ಜನ್ಯ ಡಿಸ್ಚಾರ್ಜ್...ಕೆಲವು ದಿನಗಳ ಕಾಲ ಸರಿಗಮಪ ಕಾರ್ಯಕ್ರಮಕ್ಕೆ ಬ್ರೇಕ್ - ಆಸ್ಪತ್ರೆಯಿಂದ ಅರ್ಜುನ್ ಜನ್ಯ ಡಿಸ್ಚಾರ್ಜ್
ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರಿಗೆ ವಿಶ್ರಾಂತಿ ಅವಶ್ಯಕತೆಯಿರುವುದರಿಂದ ಕೆಲವು ದಿನಗಳ ಕಾಲ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿಯಲಿದ್ದಾರೆ. ಅರ್ಜುನ್ ಜನ್ಯ ಏನಿಲ್ಲವೆಂದರೂ 1 ತಿಂಗಳ ಕಾಲ ಯಾವುದೇ ಕೆಲಸ ಮಾಡುವ ಹಾಗಿಲ್ಲ ಎಂದು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.
ಇತ್ತ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರಿಗೆ ವಿಶ್ರಾಂತಿ ಅವಶ್ಯಕತೆಯಿರುವುದರಿಂದ ಕೆಲವು ದಿನಗಳ ಕಾಲ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿಯಲಿದ್ದಾರೆ. ಅರ್ಜುನ್ ಜನ್ಯ ಏನಿಲ್ಲವೆಂದರೂ 1 ತಿಂಗಳ ಕಾಲ ಯಾವುದೇ ಕೆಲಸ ಮಾಡುವ ಹಾಗಿಲ್ಲ ಎಂದು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಒತ್ತಡ ತರುವಂತ ಕೆಲಸಗಳಿಂದ ಕಡ್ಡಾಯವಾಗಿ ಅವರು ದೂರವಿರಬೇಕು ಎಂದು ಆದೇಶಿಸಿದ್ದಾರೆ. ಈ ಕಾರಣದಿಂದ ಜನ್ಯ ಇತರ ಕಾರ್ಯಕ್ರಮಗಳ ಜೊತೆಗೆ ಕೆಲವು ದಿನಗಳ ಕಾಲ ಸರಿಗಮಪ ಕಾರ್ಯಕ್ರಮದಲ್ಲಿ ಕೂಡಾ ಕಾಣಿಸಿಕೊಳ್ಳುತ್ತಿಲ್ಲ. ಭಾನುವಾರ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಅರ್ಜುನ್ ಜನ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಬಳಿಕ ಹೃದಯದ ನಾಳಗಳು ಶೇಕಡಾ 99 ರಷ್ಟು ಬ್ಲಾಕ್ ಆಗಿದ್ದು ಕಂಡು ಬಂತು. ಈ ವೇಳೆ ಜನ್ಯ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತು. ಚಿಕಿತ್ಸೆ ನೀಡಿರುವ ವೈದ್ಯರು ಜನ್ಯ ಅವರಿಗೆ ವಿಶ್ರಾಂತಿಗೆ ಸೂಚಿಸಿದ್ದಾರೆ.
ಅರ್ಜುನ್ ಜನ್ಯ ಸರಿಗಮಪ ತೀರ್ಪುಗಾರರಾದ ಬಳಿಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು.ಇದೀಗ ಕೆಲವು ದಿನಗಳ ಕಾಲ ಪ್ರೇಕ್ಷಕರು ಅವರನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಅನುಶ್ರೀ ನಿರೂಪಣೆಯಲ್ಲಿ ಸೊಗಸಾಗಿ ಮೂಡಿಬರುತ್ತಿರುವ ಈ ಸಂಗೀತ ಸಮರದಲ್ಲಿ ತೀರ್ಪುಗಾರರಾಗಿ ನಾದ ಬ್ರಹ್ಮ ಹಂಸಲೇಖ, ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಭಾಗವಹಿಸುತ್ತಿದ್ದಾರೆ.