ಕರ್ನಾಟಕ

karnataka

ETV Bharat / sitara

ರಿಯಾಲಿಟಿ ಶೋಗೆ ಜನ್ಯ ಕಮ್ ಬ್ಯಾಕ್​​.. ಎಲ್ಲರಲ್ಲಿ ತಂದೆಯನ್ನ ನೋಡಿದೆ ಎಂದ ಮ್ಯೂಸಿಕ್ ಕಂಪೋಸರ್ - ರಿಯಾಲಿಟಿ ಶೋ ಸರಿಗಮಪ ಸೀಸನ್ 7 ಕಾರ್ಯಕ್ರಮ

ಹೃದಯ ಸಮಸ್ಯೆಯಿಂದ ಇದೀಗ ಗುಣಮುಖರಾಗಿರುವ ಅರ್ಜುನ್ ಜನ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಸರಿಗಮಪ ಸೀಸನ್ 7 ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ತಮ್ಮ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

Arjun janya
ಅರ್ಜುನ್ ಜನ್ಯ

By

Published : Mar 22, 2020, 2:03 AM IST

ಬೆಂಗಳೂರು:ಕೆಲ ದಿನಗಳ ಹಿಂದೆಯಷ್ಟೇ ಹೃದಯ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಪುನಃ ಕೆಲಸಕ್ಕೆ ಹಿಂದಿರುಗಿದ್ದಾರೆ. ಇದೀಗ ಆರೋಗ್ಯ ಸುಧಾರಣೆಯಾಗಿದ್ದು, ಅರ್ಜುನ್​ ಜನ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಸರಿಗಮಪ ಸೀಸನ್ 7 ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ನಮ್ಮ ತಂದೆಯನ್ನು ಕಳೆದುಕೊಂಡು 25 ರಿಂದ 26 ವರ್ಷ ಆಯ್ತು. ಕೆಲವು ದಿನಗಳಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ನನಗಾಗಿ ಹಾರೈಸಿದವರಲ್ಲಿ ನಮ್ಮ ತಂದೆಯನ್ನು ನೋಡಿದೆ ಎಂದು ಭಾವುಕರಾದರು. ಕೊನೆಗೆ ನಿರೂಪಕಿ ಅನುಶ್ರೀ, ಸ್ನೇಹಿತರಲ್ಲಿ ತಂದೆಯನ್ನು ಕಾಣುವ ನಿಮ್ಮ ಮನಸ್ಸು ನಿಜಕ್ಕೂ ದೊಡ್ಡದು ಎಂದು ಚಪ್ಪಾಳೆ ಮೂಲಕ ಕೊಂಡಾಡಿದರು.

ತಮಗಾಗಿ ಪ್ರಾರ್ಥಿಸಿದವರಿಗೆ ಎಷ್ಟು ಧನ್ಯವಾದ ಹೇಳಿದ್ರೂ ಕಡಿಮೆ. ನಾಡಿನ ಪ್ರತಿಯೊಬ್ಬರ ಆಶೀರ್ವಾದ, ಪ್ರಾರ್ಥನೆಯಿಂದ ಗುಣಮುಖವಾಗಿದ್ದೇನೆ. ಈ ವೇದಿಕೆಯನ್ನು ಸಹ ಮಿಸ್ ಮಾಡಿಕೊಂಡಿದ್ದೇನೆ. ಆರೋಗ್ಯದಲ್ಲಿ ಏರುಪೇರು ಕಂಡ ತಕ್ಷಣ ಎಲ್ಲರೂ ನನ್ನ ಬಳಿ ಬಂದರು. ನಾನು ಒಪ್ಪಿಕೊಂಡಿದ್ದ ಕಾರ್ಯಕ್ರಮವನ್ನ ರಾಜೇಶ್ ಕೃಷ್ಣನ್ ನಡೆಸಿಕೊಟ್ಟರು. ಇನ್ನು ವಿಜಯ್ ಪ್ರಕಾಶ್ ಮನೆಗೆ ಬಂದು ಗಾಳಿ ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತಾಯತ ಕಟ್ಟಿಸಿದರು ಎಂದಿದ್ದಾರೆ.

ABOUT THE AUTHOR

...view details