ಕರ್ನಾಟಕ

karnataka

ETV Bharat / sitara

ಅಪ್ಪು, ಅಪ್ಪ-ಅಮ್ಮನ ಅಗಲಿಕೆ ನೋವು.. ಈ ವರ್ಷ ಹುಟ್ಟು ಹಬ್ಬ ಆಚರಿಸದಿರಲು 'ಸಲಗ' ನಿರ್ಧಾರ.. - ಹುಟ್ಟು ಹಬ್ಬ ಆಚರಿಸದಿರಲು 'ಸಲಗ' ನಿರ್ಧಾರ

ನಾಳೆ ನಟ, ನಿರ್ದೇಶಕ ದುನಿಯಾ ವಿಜಯ್ ಅವರ ಹುಟ್ಟುಹಬ್ಬ. ಆದರೆ, ಈ ಬಾರಿ ಅವರು ಜನ್ಮದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವ ಅವರು, ಅಭಿಮಾನಿಗಳಿಗೆ ಮನೆ ಹತ್ತಿರ ಬರದಂತೆ ಮನವಿ ಮಾಡಿದ್ದಾರೆ..

Appu, Dad and Mom's lost pain
ಅಪ್ಪು,ಅಪ್ಪ, ಅಮ್ಮನ ಅಗಲಿಕೆ ನೋವು

By

Published : Jan 19, 2022, 6:37 PM IST

'ದುನಿಯಾ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಡಮ್ ಪಡೆದ ನಟ ವಿಜಯ್. ಕನ್ನಡ ಚಿತ್ರರಂಗದಲ್ಲಿ ದುನಿಯಾ ವಿಜಯ್​​ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನ ಸಹ ಹೊಂದಿದ್ದಾರೆ. ಸದ್ಯ ಸಲಗ ಸಿನಿಮಾವನ್ನ ನಿರ್ದೇಶನ ಮಾಡಿ, ಸಕ್ಸಸ್ ಕಂಡಿರುವ ನಟ ವಿಜಯ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ನಾಳೆ ನಟ, ನಿರ್ದೇಶಕ ದುನಿಯಾ ವಿಜಯ್ ಬರ್ತ್‌ಡೇ

ಜನವರಿ 20ರಂದು ನಟ ದುನಿಯಾ ವಿಜಯ್ ಹುಟ್ಟಿದ ದಿನ. ಆದ್ರೆ, ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳು ದೂರದ ಊರುಗಳಿಂದ ಮನೆಗೆ ಬರಬೇಡಿ. ಕತ್ರಿಗುಪ್ಪೆಯ ನಿವಾಸದಲ್ಲಿ ಹುಟ್ಟು ಹಬ್ಬದ ಸಂಭ್ರಮ ಇರುವುದಿಲ್ಲ ಎಂದು ದುನಿಯಾ ವಿಜಯ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮ್ಯಾಟ್ನಿ ಸಿನಿಮಾದ ಶೂಟಿಂಗ್​ನಲ್ಲಿ ಬ್ಯೂಸಿಯಾದ ಸತೀಶ್​​-ರಚಿತಾ ರಾಮ್​​

ಕಳೆದ ನಾಲ್ಕು ದಶಕಗಳಿಂದ ನನ್ನನ್ನು ಸಾಕಿ ಸಲಹಿದ ಅಪ್ಪ, ಅಮ್ಮನನ್ನು ಈ ವರ್ಷ ಕಳೆದುಕೊಂಡಿದ್ದೇನೆ. ಅಲ್ಲದೇ ಅಪ್ಪು ಅವರನ್ನು ಕಳೆದುಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ನನ್ನ ಹುಟ್ಟು ಹಬ್ಬವನ್ನು ಹೇಗೆ ಸಂಭ್ರಮಿಸಲಿ. ಇಡೀ ಜಗತ್ತು ಸಂಕಷ್ಟದಲ್ಲಿರುವ ಸಮಯವಿದು.

ಹುಟ್ಟುಹಬ್ಬದ ದಿನ ನಾನು ಮನೆಯಲ್ಲಿ ಇರುವುದಿಲ್ಲ. ಅಪ್ಪ ಅಮ್ಮನನ್ನು ಕಳೆದುಕೊಂಡ ನನಗೆ ನನ್ನ ಅಭಿಮಾನಿಗಳೇ ಅಪ್ಪ,ಅಮ್ಮ ಎಲ್ಲವೂ. ಹಾಗಾಗಿ, ಯಾರೂ ಮನೆಯ ಬಳಿ ಬರಬೇಡಿ.

ನೀವಿದ್ದ ಕಡೆಯಿಂದಲೇ ನನಗೆ ಹಾರೈಸಿ. ನಿಮ್ಮ ಹಾರೈಕೆ, ಆಶೀರ್ವಾದ ಎರಡೂ ನನ್ನ ಮೇಲಿರಲಿ ಅಂತಾ ದುನಿಯಾ ವಿಜಯ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ABOUT THE AUTHOR

...view details