ಕರ್ನಾಟಕ

karnataka

ETV Bharat / sitara

ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ 'ಸತ್ಯಂ ಶಿವಂ ಸುಂದರಂ' ಖ್ಯಾತಿಯ ಇಷ್ಟ - Apoorva Bharadhwaj Shining in Silver screen

'ಅನುರೂಪ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದ ಅಪೂರ್ವ ಭಾರಧ್ವಾಜ್ ಇದೀಗ ಬೆಳ್ಳಿತೆರೆಯಲ್ಲೂ ಮಿಂಚುತ್ತಿದ್ದಾರೆ. ಕುಮಾರ್​​​​​. ಎಲ್ ನಿರ್ದೇಶನದ 'ಕ್ರಿಟಿಕಲ್ ಕೀರ್ತನೆಗಳು' ಚಿತ್ರದಲ್ಲಿ ಅಪೂರ್ವ ರಾಜೇಶ್​​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

Apoorva Bharadhwaj
ಅಪೂರ್ವ ಭಾರಧ್ವಾಜ್

By

Published : Oct 3, 2020, 3:15 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ನಾಯಕಿ ಇಷ್ಟ ಆಗಿ ಅಭಿನಯಿಸುತ್ತಿದ್ದ ಅಪೂರ್ವ ಭಾರಧ್ವಾಜ್ ಇದೀಗ ಬೆಳ್ಳಿತೆರೆಯಲ್ಲೂ ಮಿಂಚುತ್ತಿದ್ದಾರೆ. ಕುಮಾರ್​​​​​. ಎಲ್ ನಿರ್ದೇಶನದ 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾದಲ್ಲಿ ಅಪೂರ್ವ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕಿರುತೆರೆ ನಟಿ ಅಪೂರ್ವ ಭಾರಧ್ವಾಜ್

ಕ್ರಿಕೆಟ್ ಬೆಟ್ಟಿಂಗ್​, ಇದರಿಂದ ಆಗುವ ಪರಿಣಾಮ ಏನು ಎಂಬ ವಿಭಿನ್ನ ಕಥಾ ಹಂದರ ಹೊಂದಿರುವ 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾದಲ್ಲಿ ಅಪೂರ್ವ ಅಭಿನಯಿಸುತ್ತಿದ್ದಾರೆ. ಸ್ಡಾರ್ ಸುವರ್ಣ ವಾಹಿನಿಯ ಅನುರೂಪ ಧಾರಾವಾಹಿಯಲ್ಲಿ ಸುನೈನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಬಂದಿರುವ ಅಪೂರ್ವ, ಸಂವಹನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ ಕೂಡಾ ಹೌದು. ಅನುರೂಪ ಧಾರಾವಾಹಿ ನಂತರ ಚಕ್ರವ್ಯೂಹ, ಗಿರಿಜಾ ಕಲ್ಯಾಣ, ವಾರಸ್ದಾರ ಹಾಗೂ ಸತ್ಯಂ ಶಿವಂ ಸುಂದರಂ ಧಾರಾವಾಹಿಗಳಲ್ಲಿ ಈಕೆ ಬಣ್ಣ ಹಚ್ಚಿದ್ದಾರೆ.

ಬೆಳ್ಳಿ ತೆರೆಯಲ್ಲೂ ಮಿಂಚುತ್ತಿರುವ ಅಪೂರ್ವ

ನಟನೆಯ ಬಗ್ಗೆ ಯಾವುದೇ ರೀತಿಯ ವಿಶೇಷ ಒಲವು ಹೊಂದಿಲ್ಲದ ಅಪೂರ್ವ ಟೆಕ್ನೀಷಿಯನ್ ಆಗಿ ಕೆರಿಯರ್ ಶುರು ಮಾಡಿದ್ದರು.‌ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿನ ಆಡಿಷನ್​​​​​​​ನಲ್ಲಿ ಭಾಗವಹಿಸಿದ ಈಕೆ 'ಅನುರೂಪ'ದ ಸುನೈನಾ ಆಗಿ ನಟಿಸಿದರು. ಸತ್ಯಂ ಶಿವಂ ಸುಂದರಂ ಧಾರಾವಾಹಿಯ ಇಷ್ಟ ಆಗಿ ಮನೆ ಮಾತಾಗಿರುವ ಅಪೂರ್ವ ಬಿ. ಸುರೇಶ್ ನಿರ್ದೇಶನದ 'ಉಪ್ಪಿನ ಕಾಗದ' ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇದೀಗ ಕ್ರಿಟಿಕಲ್ ಕೀರ್ತನೆಗಳು ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ.

ABOUT THE AUTHOR

...view details