ನಿರ್ದೇಶಕ ಪವನ್ ಒಡೆಯರ್ಗೆ ಇಂದು ವಿಶೇಷ ದಿನ. ಯಾಕಂದ್ರೆ, ಪತ್ನಿ ಅಪೇಕ್ಷಾ ಪುರೋಹಿತ್ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಪವನ್ಗೆ ಜನ್ಮದಿನದ ಭರ್ಜರಿ ಗಿಫ್ಟ್ ಸಿಕ್ಕಿದೆ. ತನ್ನ ಜನ್ಮದಿನದಂದೇ ತಂದೆಯಾಗಿರುವ ಖುಷಿಯ ವಿಚಾರವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಹುಟ್ದಬ್ಬದ ದಿನವೇ ಗಂಡು ಮಗುವಿನ ತಂದೆಯಾದ ಪವನ್ ಒಡೆಯರ್ - ಪವನ್ ಒಡೆಯರ್ಗೆ ಗಂಡು ಮಗು
ಹಲವು ಯಶಸ್ವಿ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ನಿರ್ದೇಶಕ ಪವನ್ ಒಡೆಯರ್ ಅವರು ನಟಿ ಅಪೇಕ್ಷಾ ಪುರೋಹಿತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಈ ಜೋಡಿ ಗಂಡು ಮಗುವಿಗೆ ಪೋಷಕರಾದ ಖುಷಿಯಲ್ಲಿದ್ದಾರೆ.
ಹುಟ್ಟುಬ್ಬದ ದಿನವೇ ತಂದೆಯಾದ ನಿರ್ದೇಶಕ ಪವನ್ ಒಡೆಯರ್
ಕಳೆದ ತಿಂಗಳು ಈ ಜೋಡಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಓದಿ:ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಬೇಬಿ ಬಂಪ್ ಫೋಟೋ ಶೂಟ್
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪವನ್, 'ನನ್ನ ಹುಟ್ಟುಹಬ್ಬಕ್ಕೆ ಅದ್ಭುತ ಉಡುಗೊರೆ ದೊರೆತಿದೆ. ನಾನು ಗಂಡು ಮಗುವಿನ ತಂದೆಯಾಗಿದ್ದೇನೆ. ಜೈ ಚಾಮುಂಡೇಶ್ವರಿ' ಎಂದಿದ್ದಾರೆ.